ಬೆಳಗಾವಿ 13: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೆ ದಿ. 17 ಗುರುವಾರ ಸಾ. 4.30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಗೆ ಬೇಕರಿ-ನಗಬೇಕ್ರಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪ್ರಮುಖ ಭಾಷಣಕಾರರಾಗಿ ಬೆಂಗಳೂರಿನ ಖ್ಯಾತ ಹನಿಗವಿ ಎಚ್ ಡುಂಡಿರಾಜ್ ಅವರು ಆಗಮಿಸಲಿದ್ದಾರೆ. ಹಿರಿಯ ನಗೆ ಮಾತುಗಾರರರಾದ ಪ್ರೊ. ಜಿ. ಕೆ. ಕಲಕರ್ಣಿ ಹಾಗೂ ಯುವ ಪ್ರತಿಭೆ ಕೆ. ತಾನಾಜಿ ತಮ್ಮ ಮಾತುಗಳಿಂದ ಜನರನ್ನು ರಂಜಿಸಲಿದ್ದಾರೆ.
ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿ ಎಸ್. ಎಂ. ಕುಲಕರ್ಣಿಯವರು ವಹಿಸಿಕೊಳ್ಳಲಿದ್ದು ಅತಿಥಿಗಳಾಗಿ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಆಗಮಿಸಲಿದ್ದಾರೆ. ಪ್ರಾಯೋಜಕತ್ವವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ಅರವಿಂದ ಹುನಗುಂದ ವಹಿಸಿಕೊಂಡಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಆಡಲಿದ್ದಾರೆ.
ಪ್ರವೇಶ ಉಚಿತವಾಗಿದ್ದು ಹಾಸ್ಯಪ್ರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಕ್ಕು ಹಗುರಾಗುವಂತೆ ಕ.ಸಾ. ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.