ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯಕ್ಕೆ ನ್ಯಾಕ್ ಪೀರ ಟೀಮ್ ಭೇಟಿ

ಲೋಕದರ್ಶನ ವರದಿ

ಬೆಳಗಾವಿ,23:  ನೀಡಸೋಶಿ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮಂಗಳವಾರ  18 ಮತ್ತು 19 ರಂದು ಎರಡು ದಿನಗಳ ಕಾಲ ನ್ಯಾಕ ಪೀರ ಟೀಮ್ ಭೇಟಿ ನೀಡಿದರು.

ನ್ಯಾಕ ಪೀರ ಟೀಮ್ನ ಡಾ. ರೇಣು ಜೈನ, ಉಪಕುಲಪತಿಗಳು, ಜಿವಾಜಿ ವಿಶ್ವವಿದ್ಯಾಲಯ ಗ್ವಾಲಿಯರ್ ಮಧ್ಯಪ್ರದೇಶ, ಚೇರಪರ್ಸನ, ಡಾ. ನಸೀಬ ಸಿಂಗ ಗಿಲ್ ಪ್ರೊಫೆಸರ್, ಕಂಪ್ಯೂಟರ ಸಾಯಿನ್ಸ & ಅಪ್ಲಿಕೇಶನ್ಸ, ನಿದರ್ೇಶಕರು, ಡಿಜಿಟಲ ಲನರ್ಿಂಗ ಇನಿಸಿಯೆಟಿವ್ಸ, ಎಂ.ಡಿ.ವಿಶ್ವವಿದ್ಯಾಲಯ, ರೋಹತಕ, ಹರಿಯಾಣ, ಮೆಂಬರ ಕೋ-ಅಡರ್ಿನೇಟರ ಹಾಗೂ ಪ್ರೊ. ಸತೀಶ ಚಂದ್ರ ಶಮರ್ಾ ಪ್ರೊಫೇಸರ ಮೆಕ್ಯಾನಿಕಲ್ ಮತ್ತು ಇಂಡಿಸ್ಟ್ರಿಯಲ್ ಪ್ರೊಡೆಕ್ಷನ ಇಂಜಿನಿಯರಿಂಗ, ಆಯ್.ಆಯ್.ಟಿ. ರೂರಕೀ, ಉತ್ತರಾಖಂಡ, ನ್ಯಾಶನಲ್ ಅಸೆಸ್ಸಮೆಂಟ ಹಾಗೂ ಅಕ್ರಿಡೇಶನ ಕೌನ್ಸಿಲನ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಸದರಿ ಎರಡು ದಿನಗಳ ಭೇಟಿಯ ನಂತರ ಅವರು ತಮ್ಮ ವರದಿಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಸಿ.ಕಮತೆ ಅವರಿಗೆ ಸಲ್ಲಿಸಿದರು. 

 ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ  ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಆಡಳಿತ ಮಂಡಳಿಯ ಸದ್ಯಸರು ಉಪಸ್ಥಿತರಿದ್ದರು.  ಡಾ. ಶಿಲ್ಪಾ ಶ್ರೀಗಿರಿ ಅಸೋಸಿಯೆಟ ಪ್ರೊಫೆಸರ, ಇಲೆಕ್ಟ್ರಾನಿಕ್ಸ ವಿಭಾಗ, ಅವರು ಈ ನ್ಯಾಕ ಪ್ರಕ್ರಿಯೆಯ ಸಂಘಟಿಕರಾಗಿದ್ದರು  ಇನ್ನಿತತರು ಇದ್ದರು.