ಹುಣಶ್ಯಾಳ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ದೇವರಹಿಪ್ಪರಗಿ 01 : ಹುಣಶ್ಯಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಚಾಲನೆ ನೀಡಲಾಯಿತು.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ಸುಮಿತ್ ಮೇತ್ರಿ ಮಾತನಾಡಿ, ಸಿ.ವಿ.ರಾಮನ್ ರವರು ಬೆಳಕಿನ ಪರಿಣಾಮ ಸಿದ್ಧಾಂತವನ್ನು ಮಂಡಿಸಿದಕ್ಕಾಗಿ 1930ರಲ್ಲಿ ನೊಬೆಲ್ ಪಾರಿತೋಷಕವನ್ನು ಏಷ್ಯಾ ಖಂಡದಲ್ಲಿ ಮೊಟ್ಟಮೊದಲ ಬಾರಿಗೆ ಪಡೆದುಕೊಂಡರು ಎಂದು ಹೇಳಿದರು.ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಅವಳೆ ಸಿ.ವಿ ರಾಮನ್ರವರ ಜೀವನ ಚರಿತ್ರೆ, ವಿದ್ಯಾಭ್ಯಾಸ, ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ಹೇಳಿದರು.ಮುಖ್ಯಶಿಕ್ಷಕ ಮಡಿವಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಮುಂದುವರೆದ ರಾಷ್ಟೊವಾಗಿದೆ ಜೊತೆಗೆ ಸರ್ ಸಿ ವಿ ರಾಮನ್ರ ಜೀವನ, ಅವರ ಆದರ್ಶಗಳು ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.ವಿಜ್ಞಾನ ಶಿಕ್ಷಕ ಸದ್ದಾಂ ಗಣಿ ಬೆಳಕಿನ ಚದುರುವಿಕೆ ಬಗ್ಗೆ ಸರಳ ಪ್ರಯೋಗ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ರಂಗೋಲಿಯಲ್ಲಿ ವಿಜ್ಞಾನ ಸ್ಪರ್ಧೆ ಏರಿ್ಡಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಬಿ.ಕೋಟಿಖಾನಿ, ಆರಿ್ಬ.ಬಿರಾದಾರ, ಮಾನಪ್ಪ ಪತ್ತಾರ, ಇಂದ್ರಮ್ಮ ದಿಡ್ಡಿಮನಿ, ಸುರೇಶ ಭೋವಿ ಹಾಗೂ ವಿದ್ಯಾರ್ಥಿಗಳು ಇದ್ದರು.