ಕಮದೋಡ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಆರಂಭ
ರಾಣೇಬೆನ್ನೂರು 15: ತಾಲೂಕಿನ ಕಮದೊಡ ಗ್ರಾಮದಲ್ಲಿ ರಾಣೆಬೆನ್ನೂರು ನಗರದ ಆರ್. ಟಿ.ಇ. ಎಸ್ ಕಾಲೇಜು, ತನ್ನ ವಾರ್ಷಿಕ ಯೋಜನೆಯ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು, ಗ್ರಾಮದಲ್ಲಿ ಶಿವಿರಾರ್ಥಿಗಳ ಜಾತಾ ನಡೆಸುವುದರ ಮೂಲಕ ಆರಂಭಿಸಲಾಯಿತು. ಇಂದಿನಿಂದ ಆರಂಭವಾಗಿರುವ ಈ ವಾರ್ಷಿಕ ವಿಶೇಷ ಶಿಬಿರವು ವಾರಗಳ ಕಾಲ ನಡೆಯಲಿದೆ ಎಂದು ಸಂಯೋಜಕರಾದ ಸರಸ್ವತಿ ಬೊಮ್ಮನಾಳ ಹೇಳಿದರು. ಈ ಸಂದರ್ಭದಲ್ಲಿ, ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾಹುಕಾರ, ಪಂಚಾಯತ್ ಸದಸ್ಯರು, ಪಿಡಿಒ ಗ್ರಾಮದ ಸದಸ್ಯರು ಉಪನ್ಯಾಸಕರಾದ ಶಿವಕುಮಾರ್ ಬೆಣ್ಣಿ, ನಾಗರಾಜ ಲಮಾಣಿ, ಅಜಯ್ ಮತ್ತು ಉಪನ್ಯಾಸಕರು, ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.