ಶಿಗ್ಗಾವಿ11 : ಗ್ರಾಮೀಣ ಜನರಲ್ಲಿ ಹುದುಗಿರುವ ಕೌಶಲ್ಯಯುಕ್ತ ಜನಪದ ಕಲೆಗೆ ಪ್ರಸ್ತುತ ದಿನದಲ್ಲಿ ಬೆಂಬಲಿಸುವ ಅಗ್ಯತತೆ ಅವಶ್ಯಕವಾಗಿದೆ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಸುನಂದಾ ಆರ್. ಕಳಕನ್ನವರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಇಂದು ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರ ಪುನರುಜ್ಜೀವನಕ್ಕೆ ಜಾನಪದ ವಿಶ್ವವಿದ್ಯಾಲಯದ ಪ್ರತಿಯೊಬ್ಬರು ಶ್ರಮಿಸೋಣ. ಕಲಾವಿದರ ಅಭೂತಪೂರ್ವ ಸೃಜನಶೀಲತೆಯನ್ನು, ಕಲಾಗಾರಿಕೆಯನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಆಧುನಿಕತೆ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿವೆ. ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣದ ಮೂಲಕ ಸಮಾನತೆಯನ್ನು ಸ್ಥಾಪಿಸಬೇಕಾಗಿದೆ. ಗಂಡು-ಹೆಣ್ಣು ಎಂಬ ಬೇಧ ಮಾಡದೆ ಸಮಾನವಾಗಿ ಅವಕಾಶಗಳನ್ನು ಸೌಹರ್ದತೆಯಿಂದ ಬಳಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿ, ಮಹಿಳಾ ದಿನಾಚರಣೆ ಶತಮಾನ ಹಿಂದೆಯೇ ಪ್ರಾನ್ಸ್ನಲ್ಲಿ ಜಾರಿಗೆ ಬಂದಿದ್ದು, ಮಹಿಳೆಯರಿಗೆ ಸಮಾನತೆ ಇನ್ನು ದೊರೆತಿಲ್ಲ ಎಂಬುದು ಕಟುಸತ್ಯ. ಮಾತೃಪ್ರಧಾನ ಕಟುಂಬ ಇದ್ದ ಭಾರತ ದೇಶ ಇಂದು ಪಿತೃ ಪ್ರಧಾನವಾಗಿ ಬದಲಾಗಿದೆ. ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ತನ್ನ ಕೀಳರಿಮೆ ತೊರೆದು ಆತ್ಮಸ್ತರ್ಯದಿಂದ ಬೆಳೆಯಬೇಕು ಎಂದರು.
ಜಗತ್ತಿನಲ್ಲಿ ವಿಶಿಷ್ಠ ಕೌಶಲ್ಯಕ್ಕೆ ಅವಕಾಶಗಳಿದ್ದು, ಕೌಶಲ್ಯವನ್ನು ಬಳಸಿಕೊಂಡು ಜಾಗತೀಕ ಸವಾಲುಗಳನ್ನು ಎದುರಿಸಿ ಸ್ವಯಂ ಉದ್ಯೋಗವನ್ನು ಹೊಂದುವ ಜೊತೆಗೆ ಆಥರ್ಿಕ ಸ್ವಾವಲಂಬಿಗಳಾಗಿ ಬೆಳೆಯಬೇಕು. ಭಾರತದಲ್ಲಿ ಓದಿಗೆ ತಕ್ಕ ವೃತ್ತಿಯ ಎಂಬ ಆಯ್ಕೆಯ ಅಲೋಚನೆ ಇದೆ. ಆದರೆ ಜಗತ್ತೀನ ಅಭಿವೃದ್ಧಿ ರಾಷ್ಟ್ರಗಳಲ್ಲಿ ಜನರು ವೃತ್ತಿಗೂ ತಮ್ಮ ಪ್ರವೃತ್ತಿಗೂ ಭಿನ್ನತೆಯಿದ್ದು, ತೃಪ್ತಿ ಇರುವ ಕೆಲಸ ಕಾರ್ಯಗಳನ್ನು ಹೊಂದುವ ಮನಸ್ಥಿತಿಯವರಾಗಿದ್ದಾರೆ. ಸವಾಲುಗಳನ್ನು ಎದುರಿಸಿದರೆ ಮಾತ್ರ ಸಾಧನೆ ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಯ ಕುಲಸಚಿವರಾದ ಪ್ರೊ.ಚಂದ್ರಶೇಖರ ಅವರು ಮಾತನಾಡಿ, ಪುರುಷ ಕೇಂದ್ರಿತ, ಸ್ತ್ರೀ ಕೇಂದ್ರಿತ ಸಮಾಜ ಎಂಬ ಭಾವನೆಗಿಂತ ಕುಟುಂಬ ಕೇಂದ್ರಿತ ಸಮಾಜ ಎಂಬುದು ಸತ್ಯದ ಸಂಗತಿ. ಪುರುಷರ ಶಿಸ್ತುಬದ್ಧ ಜೀವನಕ್ಕೆ ಸ್ತ್ರೀಯ ಪಾತ್ರ ಬಹುಮುಖ್ಯ. ಒರ್ವ ಮಹಿಳೆಯಿಂದಾಗಿ ಕುಗ್ರಾಮಗಳು ಮಾದರಿ ಗ್ರಾಮಗಳಾಗಿ ಪರಿರ್ವತನೆಯಾದ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ತಾಳ್ಮೆಯಿಂದ ಕೌಶಲ್ಯವನ್ನು ಬೆಳೆಸಿಕೊಂಡು ಸಾರ್ಥಕ ಬದುಕು ಸಾಗಿಸಿ ಎಂದು ಹೇಳಿದರು.
ಈ ಸಮಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಜಾನಪದ ವಿವಿಯ ಕಲಾ ವಿಭಾಗದ ವಿದ್ಯಾಥರ್ಿ ಶ್ರೀಕಾಂತ ಭಜಂತ್ರಿ ಅವರು ಮಂಗಳವಾದ್ಯ ನುಡಿಸಿ ಪ್ರಾಥರ್ಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸುವರ್ಣ ಜಯದತ್ತ ಶೃಂಗೇರಿ ಅವರು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಮಾಲತೇಶ್ವರ ಬಾಕರ್ಿ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.