ಗದಗ ಜಿಲ್ಲಾ ವಕೀಲರ ಸಂಘದಲ್ಲಿ ಮಹಿಳಾ ವಕೀಲರ ಭವನ ನಿರ್ಮಾಣಕ್ಕೆ ನೂತನ ಪದಾಧಿಕಾರಿಗಳು ಶ್ರಮವಹಿಸಲಿ : ರಾಘವೇಂದ್ರ ಪಾಲನಕರ
ಗದಗ 26:- ಸನ್ 2025 -27 ನೇ ಸಾಲಿನ ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯು ಅತ್ಯುತ್ಸಾಹದೊಂದಿಗೆ ಜರುಗಿ ನೂತನ ಪದಾಧಿಕಾರಿಗಳಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ರಾಜಶೇಖರ್ ಗಂಗಪ್ಪ ಕಲ್ಲೂರ್, . ಉಪಾಧ್ಯಕ್ಷರಾಗಿ ಮುದಕಪ್ಪ ಅಂದಪ್ಪ ಸಂಗನಾಳ, ಪ್ರಧಾನ ಕಾರ್ಯದರ್ಶಿಗಳಾಗಿ ಮಹಾಂತೇಶ ಅಯ್ಯಪ್ಪ ನಾಯ್ಕರ್ ಸಹ ಕಾರ್ಯದರ್ಶಿಗಳಾಗಿ ಚನ್ನಾರೆಡ್ಡಿ ಬಸವರಾಜ ಗೂಳರೆಡ್ಡಿ, .ಹಾಗೂ ವಿಶೇಷವಾಗಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹಿಳಾ ವಕೀಲರಿಗಾಗಿಯೇ ಮೀಸಲಿರುವ ಖಜಾಂಚಿ ಸ್ಥಾನದಲ್ಲಿ ಮಹಿಳಾ ವಕೀಲರಾದ ಶೈಲಜಾ ಬಸಯ್ಯ ಹಿರೇಮಠ ರವರು ಆಯ್ಕೆಯಾಗಿರುವರು.
ವಿಶೇಷವಾಗಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹಿಳಾ ವಕೀಲರಿಗಾಗಿಯೇ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಮಹಿಳೆಯರಿಗಾಗಿಯೇ ಎಂದು ವಿಶೇಷ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಒಂದು ಐತಿಹಾಸಿಕ ಬಹುನೀರೀಕ್ಷೆಯ ಆದೇಶವನ್ನು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಆದೇಶಿಸಲಾಗಿರುತ್ತದೆ.ಆದರೆ ಗದಗ ಜಿಲ್ಲಾ ವಕೀಲರ ಸಂಘದಲ್ಲಿನ ಆವರಣದಲ್ಲಿ ಮಹಿಳಾ ವಕೀಲರಿಗಾಗಿ ಯಾವುದೇ ವಿಶೇಷ ಕೊಠಡಿ ಅಥವಾ ಮಹಿಳಾ ವಕೀಲರ ಭವನ ಇಲ್ಲದಿರುವುದು ತುಂಬಾ ವಿಷಾದನೀಯ ಸಂಗತಿಯಾಗಿರುತ್ತದೆ. ಇದರಿಂದಾಗಿ ಮಹಿಳಾ ವಕೀಲರು ತಮ್ಮದೇಯಾದ ಒಂದು ಮಹಿಳಾ ವಕೀಲರ ಭವನ ಇಲ್ಲದಿರುವುದರಿಂದ ತುಂಬಾ ತೊಂದರೆಗಳನ್ನು ಎದುರಿಸುವಂತಾಗಿರುತ್ತದೆ.ಆದುದರಿಂದ ಗದಗ ಜಿಲ್ಲಾ ವಕೀಲರ ಸಂಘದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮಹಿಳಾ ವಕೀಲರ ಭವನದ ಅನುಷ್ಠಾನಕ್ಕಾಗಿ ವಿಶೇಷ ಮುತುವರ್ಜಿಯನ್ನು ವಹಿಸಬೇಕಾಗಿರುವದು ಅತ್ಯಾವಶ್ಯಕವಾಗಿರುತ್ತದೆ ಎಂದು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.