ವಿಜಯಪುರ 28: ಅವಳಿ ಜಿಲ್ಲೆಯ ಪ್ರತಿಷ್ಠಿತ ಜಿ.ಓ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗೆ ಗುರುಸ್ಪಂದನಾ ಪೆನಲ್ ವತಿಯಿಂದ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ನಿರ್ದೇಶಕ ಹಣಮಂತ ಕೊಣದಿ 116 ವರ್ಷಗಳ ಇತಿಹಾಳ ಹೊಂದಿರುವ ನಮ್ಮ ಬ್ಯಾಂಕು ಪ್ರಗತಿಪಥದಲ್ಲಿದೆ ಈ ಸಲ 1.75 ಕೋಟಿ ನಿವ್ಹಳ ಲಾಭ ಗಳಿಸಿದ್ದು ಅವಳಿ ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿದೆ, ನೌಕರರ ಅನುಕೂಲಕ್ಕಾಗಿ ಬಡ್ಡಿ ದರವನ್ನು ಇಳಿಸಲಾಗಿದ್ದು ವಯಕ್ತಿಕ ಸಾಲ 12 ಲಕ್ಷದ ವರೆಗೆ ನೀಡಲಾಗುತಿದೆ, ಬ್ಯಾಂಕಿನ ಕಾರ್ಯವ್ಯಾಪ್ತಿಯೂ ಅವಳಿ ಜಿಲ್ಲೆಯಲ್ಲದೇ ಕಲಬುರ್ಗಿ, ಬೆಳಗಾವಿ, ಕೊಪ್ಪಳ, ರಾಯಚೂರ, ಗದಗ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ, ನೌಕರರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಗುರುಸ್ಪಂದನಾ ಪೆನಲ್‌ನ 9 ಅಭ್ಯರ್ಥಿಗಳಿಗೂ ಮತ ನೀಡಿ ಬೆಂಬಲಿಸಿ ಆರ್ಶಿವದಿಸಬೇಕೆಂದು ವಿನಂತಿಸಕೊಂಡರು.
ಬಾಗಲಕೋಟ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಬಾಗೇನ್ನವರ, ಅಲ್ಲಾಭಕ್ಷ ವಾಲಿಕಾರ ಮಾತನಾಡಿ ಸರಕಾರಿ ನೌಕರರ ಅನುಕೂಲಕ್ಕಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ತರುತಿದ್ದು, ಬ್ಯಾಂಕಿಂಗ ವ್ಯವಸ್ಥೆಯನ್ನು ತಂತ್ರಜ್ಞಾನ ಸಹಿತ ಅಭಿವೃದ್ಧಿಪಡಿಸಲಾಗಿದೆ, ಪೋನ್ ಫೆ, ಗೂಗಲ್ ಫೆ ಬ್ಯಾಂಕಿಂಗ ಸೇವೆಯನ್ನು ಉತ್ತಮಪಡಿಸಲಾಗಿದೆ, ದಯವಿಟ್ಟು ನಮ್ಮ ಪೆನಲ್‌ನ 9 ಜನರಿಗೆ ಮತ ನೀಡುವಂತೆ ಮನವಿ ಮಾಡಿದರು.
ಇದಕ್ಕೂ ಮುಂಚೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ಹೊರಟು ಪಾದಯಾತ್ರೆ ಮೂಲಕ ಜೆ.ಓ.ಸಿ.ಸಿ ಬ್ಯಾಂಕಿಗೆ ತಲುಪಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಜೆ.ಓ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ, ಅಭ್ಯರ್ಥಿ ಅಶೋಕ ಚನಬಸಗೊಳ, ಚಂದ್ರಶೇಖರ ಜಿತ್ತಿ, ಮಲ್ಲಿಕಾರ್ಜುನ ಟಕ್ಕಳಕಿ, ಪುಷ್ಪಾ ಗಚ್ಚಿನಮಠ, ಗೀತಾ ಹತ್ತಿ(ಕಳಸಗೊಂಡ), ಪದಾಧಿಕಾರಿಗಳಾದ ಬಿ.ಎಸ್.ಮಠ, ಅಶೋಕ ದಡಕೆ, ಹಣಮಂತ ಕಾಲೆಭಾಗ, ರಾಜು ಜಾಧವ, ಬಸವರಾಜ ಬೇನೂರ, ವಾಯ್.ಪಿ.ಪಾಟೀಲ, ಎಸ್.ವಿ ಹರಳಯ್ಯ, ಎಂ ಎಂ.ವಾಲಿಕಾರ, ಸೋಮನಾಥ ಬಾಗಲಕೋಟ, ಸಿ.ಜಿ.ಕಟಕೋಳ, ಸುರೇಶ ಪೋರವಾರ, ವಾ.ಜಿ.ಯತ್ನಟ್ಟಿ, ಸಾಬು ಗಗನಮಾಲಿ, ಅಶೋಕ ಭಜಂತ್ರಿ ಸೇರಿದಂತೆ 500 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.