ಉತ್ತರ ಚೈನಾ : ಉಕ್ಕು ಸ್ಥಾವರಕ್ಕೆ ಬೆಂಕಿ-7 ಸಾವು

ಶಿಜಿಯಾದುವಾಂಗ್, ಅ 24:     ಉತ್ತರ ಚೈನಾದ ಹೆಬಿ ಪ್ರಾಂತ್ಯದ ಉಕ್ಕಿನ ಸ್ಥಾವರದಲ್ಲಿ ಗುರುವಾರ ಅಗ್ನಿ ಆಕಸ್ಮಿಕದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

    ಹಂದನ್ ನಗರ ಮೂಲದ ಹೆಬೀ ಕ್ಸಿಂಗ್ಹುವಾ ಕಬ್ಬಿಣ ಮತ್ತು ಉಕ್ಕು ಸ್ಥಾವರದದಲ್ಲಿ ಸುಮಾರು 3: 30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹೆಬಿ ಪ್ರಾಂತೀಯ ತುರ್ತುಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ. 

ಅಗ್ನಿ ಆಕಸ್ಮಿಕ ಸಂಭವಿಸಲು ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ.