ವಿಜಯಪುರ 30: ವಾರ್ಡ ನಂ 21 ಲಕ್ಷ್ಮೀ ನಗರ ವೆಂಕಟೇಶ ನಗರದಲ್ಲಿ 29-12-2024 ರಂದು ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ನುಡಿ ನಮನ ಕಾರ್ಯಕ್ರಮ ಜರುಗಿತು.
ಲಕ್ಷ್ಮೀ ನಗರ ವೆಂಕಟೇಶ ರಸ್ತೆಯ ಮಧ್ಯದಲ್ಲಿರಂಗೋಲಿ ಹಾಕಿ ಮಹಿಳೆಯರು ಭಕ್ತಿ ಪೂರ್ವಕವಾಗಿ 1001 ದೀಪವನ್ನು ಹಚ್ಚಿ ಅಲಂಕರಿಸಿದರು.7 ಗಂಟೆಗೆ ಶ್ರೀ ಸಿದ್ಧೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಶಿವಾನಂದ ಶಾಸ್ತ್ರಿ ಹಿರೇಮಠ, ಎಂ.ಎಸ್.ಮಠ, ಗುರುಲಿಂಗಯ್ಯ ಹೊಸಮಠ, ವೀರಶೈವ ಲಿಂಗಾಯತ ಟ್ರಸ್ಟ್‌ನ ಉಪಾಧ್ಯಕ್ಷರಾದ ಚನ್ನಬಸಯ್ಯ ಹಿರೇಮಠ, ಮಹಾನಗರ ಪಾಲಿಕೆ ಸದಸ್ಯ ಕುಮಾರ ಉರ್ಫ ಮಲ್ಲಿಕಾರ್ಜುನ ಗಡಗಿ, ಲಕ್ಷ್ಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಎಸ್. ನವಲಿ, ಯುವ ಮುಖಂಡ ಪ್ರವೀಣ ಕಿಚಡಿ, ಮಲ್ಲಪ್ಪ ಜೀರಲಭಾವಿ, ಮಂಜುನಾಥ ದೊಡಮನಿ, ಬಡಾವಣೆಯ ಹಿರಿಯರಾದ ಈಶ್ವರ ಹೂಗಾರ, ಅರ್ಜುನ ಸಾರವಾಡ, ಸಾಯಬಣ್ಣ ಕಮತಗಿ, ಆರ್.ಎಸ್. ವಾಲೀಕಾರ, ಪ್ರದೀಪ ಮುಸ್ಕಿನ, ಎಂ.ಐ.ಬಿರಾದಾರ, ಬಳ್ಳೂಳಸರ್, ರಾಘುಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ವಿಠ್ಠಲ ದೇವಣಗಾಂವ ಮಾತನಾಡಿದರು. ಜಿ.ವಿ.ರಾಘವ, ಹಾಗೂ ಮಹಾನಗರ ಪಾಲಿಕೆ ಸದಸ್ಯಕುಮಾರ ಉರ್ಫ ಮಲ್ಲಿಕಾರ್ಜುನ ಗಡಗಿ ನುಡಿ ನಮನ ಕುರಿತು ಮಾತನಾಡಿದರು. ಹಾಗೂ ಯುವ ಧುರೀಣ ಪ್ರವೀಣ ಕಿಚಡಿ ಮಾತನಾಡಿದರು.
ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಡಾವಣೆಯ ಮಹಿಳೆಯರಾದ ವಿಜಯಲಕ್ಷ್ಮೀ ಗಂಜಾಳ, ರೇಖಾ ಅಕ್ಕಿಹುಗ್ಗಿ, ಅನೀತಾ ಮಿರ್ಜೆ, ಗೀತಾಜಗಶೆಟ್ಟಿ, ಸವಿತಾಜಗಶೆಟ್ಟಿ, ನಾಗಮ್ಮ ಹಿರೇಮಠ, ಅಶ್ವಿನಿ ಮೈಲಿಕರ, ವಿಜಯಲಕ್ಷ್ಮೀ ಮೇಟಿ, ಭಾಗ್ಯಾಪಾಟೀಲ, ಸುರೇಖಾಕುದರಿ, ರೋಹಿಣಿ ಶಾಸ್ತ್ರಿಮಠ, ಯುವಧುರೀಣರಾದ ನಾಗೇಶ ಪೂಜಾರಿ, ಶರತ ಬಿರಾದಾರ, ಮಹೇಶ ಮಡಿವಾಳಕರ, ಸಂಕೇತ ಪಾಟೀಲ, ಆಕಾಶ ನಂದಿ, ರವಿ ಚಬ್ಬಿ, ಮಂಜು ಮೈಲಿಕರ ಹಾಗೂ ಲಕ್ಷ್ಮೀ ಗಜಾನನ ಯುವಕ ಮಂಡಳಿ ಹಾಗೂ ನಾಡದೇವಿ ಉತ್ಸವ ಮಂಡಳಿ ಲಕ್ಷ್ಮೀ ನಗರಇವರಿಂದ ಭಕ್ತಿ ಪೂರ್ವಕ ನುಡಿನಮನ ಕಾರ್ಯಕ್ರಮ ಜರುಗಿತು. ರಾತ್ರಿ 9.30 ರಿಂದಅನ್ನ ಪ್ರಸಾದವನ್ನು ಬಡಾವಣೆಯ ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.
ಬಡಾವಣೆಯ ಸದ್ಭಕ್ತರಿಂದ 2000 ರಿಂದ 3000 ಜನರಿಗೆಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸತತವಾಗಿ 3 ವರ್ಷಗಳಿಂದ ಭಕ್ತಿ ಶ್ರದ್ಧಾಪೂರ್ವಕವಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನುಡಿನಮನ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಮುಂದೆಯೂ ಇದೇ ರೀತಿ ಕಾರ್ಯಕ್ರಮ ನಡೆದುಕೊಂಡು ಹೋಗಲು ಶಿವಾನಂದ ಶಾಸ್ತ್ರಿಗಳು ಪ್ರವಚನದ ಮೂಲಕ ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ಜನರಿಗೆ ಹೇಳುತ್ತಾ ಮುಂದಿನ ಯುವ ಪೀಳಿಗೆಗಳಿಗೆ ಭಕ್ತಿಯನ್ನುಯಾವರೀತಿ ಅಳವಡಿಸಿಕೊಳ್ಳಬೇಕೆಂಬುವುದನ್ನು ತಿಳಿಸಿಕೊಟ್ಟರು.
ಈ ಪೆಂಡಾಲದ ವ್ಯವಸ್ಥೆಯನ್ನುರವಿ ಚಬ್ಬಿ ಹಾಗೂ ಮಂಜು ಮೈಲಿಕರಇವರು ಸೇವೆಯನ್ನು ಮಾಡಿದರು.
ಇತರರು ಸಮಸ್ತ ಬಡಾವಣೆಯ ನಾಗರಿಕರು ಮಹಿಳೆಯರನ್ನೊಳಗೊಂಡು ಕಾರ್ಯಕ್ರಮ ವಿಜೃಂಭಣೆಯಿಂದಜರುಗಿತು.