ವಿಜಯಪುರ 17: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ನಸಿಂರ್ಗ್ ಮಹಾವಿದ್ಯಾಲಯದಲ್ಲಿ 2024-25 ಶೈಕ್ಷಣಿಕ ವರ್ಷದ ಮೊದಲನೇ ವರ್ಷದ ಜಿ.ಏನ್.ಎಂ ಮತ್ತು ಬಿ.ಎಸ್.ಸಿ ನಸಿಂರ್ಗ್ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಬುಧವಾರ ಕಾಲೇಜಿನಲ್ಲಿ ನಡೆಯಿತು.
ಈ ಕಾರ್ಯಕ್ರಮದಕ್ಕೆ ಚಾಲನೆ ನೀಡಿದ ಬೆಂಗಳೂರಿನ ಎಂ. ಎಸ್. ರಾಮಯ್ಯ ಇನಸ್ಟಿಟ್ಯೂಟ್ ಆಫ್ ನಸಿಂರ್ಗ್ ಕಾಲೇಜಿನ ಡೀನ್ ಮತ್ತು ಪ್ರಿನ್ಸಿಪಾಲ ಡಾ. ಸೋನಾಲಿ ಜಾಧವ ಮಾತನಾಡಿ, ನಸಿಂರ್ಗ್ ವಿದ್ಯಾರ್ಥಿಗಳು ಜೀವನ ಮತ್ತು ವೃತ್ತಿಯಲ್ಲಿ ವಹಿಸಬೇಕಾದ ಶಿಸ್ತು ಮತ್ತು ಇತರ ವೃತ್ತಿಗಳಿಗೆ ಇರುವ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಮತ್ತು ರೇಡಿಯಾಲಾಜಿಸ್ಟ್ ಡಾ. ವೀರೇಶ ಹಂಚಿನಾಳ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಸರ್ಚ್ ಮತ್ತು ಡೆವಲೆಪಮೆಂಟ್ ಸೆಲ್ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ, ನಸಿಂರ್ಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಬಿ.ಎಸ್ಸಿ ಮೊದಲನೆ ವರ್ಷದ ವಿದ್ಯಾರ್ಥಿಗಳ ವರ್ಗ ಸಂಯೋಜಕ ನಜೀರ ಬಳಗಾರ, ಜಿ.ಎನ್.ಎಂ ಮೊದಲನೇ ವರ್ಗದ ವಿದ್ಯಾರ್ಥಿಗಳ ವರ್ಗ ಸಂಯೋಜಕಿ ಆಶಾ ಕಣ್ಣೂರ ಮುಂತಾದವರು ಉಪಸ್ಥಿತರಿದ್ದರು.
ಉಪಪ್ರಾಚಾರ್ಯೆ ಡಾ. ಸುಚಿತ್ರಾ ರಾಟಿ ಸ್ವಾಗತಿಸಿದರು. ಡಾ. ಶ್ವೇತಾ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸೌಜನ್ಯ ಪರಿಚಯಿಸಿದರು. ಡಾ. ಕವಿತಾ ಕೆ. ಪ್ರತಿಜ್ಞಾವಿಧಿ ಭೋದಿಸಿದರು. ಡಾ. ಜಯಶ್ರೀ ಪೂಜಾರ ಮತ್ತು ಭಾಗ್ಯಶ್ರೀ ಬಾಗೇವಾಡಿ ನಿರೂಪಿಸಿದರು. ಬಾಪು ಖೋದ್ನಾಪುರ ವಂದಿಸಿದರು.