ಗದಗ 07: ಜವಳಗಲ್ಲಿಯಲ್ಲಿ ಅಂಗನವಾಡಿ ಕೇಂದ್ರ ಸಂ:-191, 192ರಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿಗಳಾದ ಎಸ್ ಜಿ ಸಲಗೆರೆ ಇವರು ಮಾತನಾಡಿ ಪ್ರತಿದಿನ ತರಕಾರಿ, ಸೋಪ್ಪು, ಹಣ್ಣು, ಹಾಲು ಪ್ರತಿದಿನ ಸೇವಿಸಬೇಂದು ಹಾಗೂ ಅಂಗನವಾಡಿಯಲ್ಲಿ ಕೊಡುವಂತಹ ಆಹಾರವನ್ನು ಫಲಾನುಭವಿಯೇ ಸೇವಿಸಬೇಕು ಎಂದು ತಿಳಿಸಿದರು. ಹಾಗೂ ಸಭೆಯಲ್ಲಿ ನೆರೆದಿರುವತಂಹ ಮಹಿಳೆಯರು ಸಮಸ್ಯೆಯನ್ನು ಆಲಿಸಿದರು. ನಂತರ ಅಕ್ಕಮಹಾದೇವಿ ಕೆ ಎಚ್ ಉಪನಿದರ್ೇಶಕರು ಮಮಅಇ ಇವರು ಮಾತನಾಡಿ ಮಹಿಳೆಯರು ಕುಳಿತುಕೊಳ್ಳಲು ನಡೆದಾಡಲು ನಮಗೆ ಶಕ್ತಿ ಬೇಕು ಆದಕಾರಣ ಪ್ರತಿದಿನ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು ಹೊರೆತು ಬೇಕರಿ ಪಧಾರ್ಥಗಳನ್ನು ತಿನ್ನಬಾರದು ಎಂದು ತಿಳಿಸಿದರು. ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಯುತ, ಮೃತ್ಯುಂಜಯ ಗುಡ್ಡದಾನ್ವೇರಿ ಇವರು ಮಾತನಾಡಿ ಅಂಗನವಾಡಿಯಲ್ಲಿ ಕೊಡುವಂತಹ ಸೌಲಭ್ಯವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಹಾಜರಿದ್ದ ಮಾಜಿ ಪುರ ಸಭೆ ಸದಸ್ಯ, ಕಮರ್ ಸುಲ್ತಾನ ನಮಾಜಿ ಮಹಿಳೆಯರು ಕುಟುಂಬದ ಬೆನ್ನೆಲಬು ಇದ್ದಂತೆ ಅವರು ಒಳ್ಳೆಯ ಆಹಾರವನ್ನು ಸೇವಿಸಿ ಗಟ್ಟಿಯಾಗಿರಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷ್ಮೀ ಗುರುಬಸನಗೌಡ್ರ ಇವರು ನೆರೆವೇರಿಸಿದರು. ಹಾಗೂ ಸ್ವಾಗತವನ್ನು ರೇಣುಕಾ ಮಾಗಡಿ ಇವರು ಮಾಡಿದರು. ಪ್ರಾರ್ಥನೆಯನ್ನು, ಕೆ ಪಿ ಹಿರೇಮಠ ಅಂಗನವಾಡಿ ಕಾರ್ಯಕತರ್ೆ ಇವರು ಮಾಡಿದರು. ಹಾಗೂ ಈ ಸಭೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯಾದ ರೋಣದ, ಎಸ್ ಆರ್ ಕುಲಕಣರ್ಿ, ಯಚ್ಚಲಗಾರ, , ಶೋಭಾ ರಾಯಚೂರ, ಅಕ್ಕಿ, ಮತ್ತು ನವಲಗುಂದ ಹಾಜರಿದ್ದರು.