ನ. 30ರಿಂದ ಜ್ಞಾನ ದಾಸೋಹದ ಶರಣ ಸಂಸ್ಕೃತಿ ಉತ್ಸವ

ಹಾವೇರಿ : ಜಿಲ್ಲೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜ್ಞಾನದಾಸೋಹದ ಶರಣರ ಸಂದೇಶ  ಸಮಾಜದ ಜನರಿಗೆ ಉಣಬಡಿಸುವ ಹಬ್ಬ ಎಂದು ಪ್ರಸಿದ್ದಿ ಪಡೆದ ಹೊಸಮಠದ ಶರಣ ಸಂಸ್ಕೃತಿ ಉತ್ಸವ-2018 ನ,30 ಡಿಸೆಂಬರ್ 01,02 ರಂದು ಜರುಗಲಿದೆ ಎಂದು ಬಸವಕೇಂದ್ರ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಹೇಳಿದರು.

ನಗರದ ಹೊಸಮಠದ ಆವರಣದಲ್ಲಿ ಸುದ್ಧಿಗೋಷ್ಠಿಯಲ್ಲಿ  ಹಾಗೂ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಲಿಂ, ಜಗದ್ಗುರು ಶ್ರೀನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಅಥಣಿ ಶ್ರೀ ಮುರುಗೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವದ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಅವರ ತತ್ವ ಆದರ್ಶಗಳ ಪರಾಮರ್ಷಗಳ ಅವಲೋಕನಗಳ ಕಾರ್ಯಕ್ರಮಗಳು ಜರುಗಲಿದೆ.

ಡಿ,30 ರಂದು ಸಂಜೆ ಜಮುರಾ ನಾಟಕೋತ್ಸವ ಜರುಗಲಿದ್ದು,ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು,ಅಗಡಿಯ ಪ್ರಭುಸ್ವಾಮಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಹಾಗೂ ಕೂಡಲದ ಗುರುನಂಜೇಶ್ವರಮಠದ ಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.ಜಿಪಂ ಅಧ್ಯಕ್ಷರಾದ ಎಸ್ಕೆ ಕರೆಯಣ್ಣನವರ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ ಪರಶುರಾಮ್,ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಆರ್ವ್ಹಿ ಚಿನ್ನಿಕಟ್ಟಿ. ಕಸಾಪ ಸದಸ್ಯರಾದ ಅಶೋಕ ಹಳ್ಳಿಯವರ್ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ವಹಿಸಲಿದ್ದು, ಬೆಳಕಿನೆಡೆಗೆ ಎಂಬ ನಾಟಕ ಜರುಗಲಿದೆ

ಡಿ.01 ರಂದು ಬೆಳಿಗ್ಗೆ 7:30 ಕ್ಕೆ ಹೊಸಮಠದ ಆವರಣದಲ್ಲಿ ಡಾ. ಶ್ರೀ ಶಿವಮೂತರ್ಿ ಮುರುಘಾ ಶರಣರ ಪ್ರಾತ್ಯಕ್ಷಿಕೆಯ ಸಹಜ ಶಿವಯೋಗ ಜರುಗುವುದು. ವಿವಿಧ ಮಠಗಳ ಮಠಾಧೀಶರು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸುವರು.  10 ಘಂಟೆಗೆ ಜಿಲ್ಲಾಧಿಕಾರಿ ಡಾ|| ವೆಂಕಟೇಶ್ ಎಂವ್ಹಿಯವರು ಸೈಕಲ್ ಜಾಥಾ ಚಾಲನೆ ನೀಡುವರು. ನಗರದ ಕಾಗಿನೆಲೆ ರಸ್ತೆಯ ಶ್ರೀ ಮುರುಗೀಸ್ವಾಮಿಮಠದಲ್ಲಿ ಬಸವತತ್ವ ಧ್ವಜಾರೋಹಣ ಜರುಗಲಿದೆ.10 45 ಘಂಟೆಗೆ ಜಿಲ್ಲೆಯ ವಿವಿಧ ಇಲಾಖೆಯ ಸಹಯೋಗದಲ್ಲಿ ಕೃಷಿ ಮೇಳ.ಜಾನುವಾರ ಮೇಳ.ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯಗಳ ಮೇಳ ಜರುಗಲಿವೆ. ಸಂಜೆ 6;30 ಕ್ಕೆ ವಿಚಾರ ಕೂಟ ಹಾಗೂ ಹಾಸ್ಯ ಸಂಭ್ರಮ ಸೇರಿದಂತೆ ಅನೇಕ ವಿಚಾರಾತ್ಮಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಡಿ,02 ರಂದು ಬೆಳಿಗ್ಗೆ 7:30 ಕ್ಕೆ ಸಹಜ ಶಿವಯೋಗ  ಸಂಜೆ 6;30 ಕ್ಕೆ ಸಮಾಜ ಸುಧಾರಣೆ ಮತ್ತು ಹೋರಾಟ ಹೆಜ್ಜೆಗಳು ಎಂಬ ವಿಚಾರ ಕೂಟ ಜರುಗಲಿದೆ.  ಡಾ. ಶ್ರೀ ಶಿವಮೂತರ್ಿ ಮುರುಘಾ ಶರಣರು ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಬಂಡಾಯ ಕವಿ. ಹಿರಿಯ ಸಾಹಿತಿಗಳಾದ ಸತೀಶ ಕುಲಕಣರ್ಿಯವರಿಗೆ 2018 ರ ರಾಜ್ಯ ಪ್ರಶಸ್ತಿಯಾದ ಡಾ. ಶಿಮುಶ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಗಣ್ಯಾತಿ ಗಣ್ಯರು ಹಾಗೂ ಮಠಾಧೀಶರು ಭಾಗವಹಿಸುವರು. ಸಾಂಸ್ಕೃತಿಕ ಸಂಭ್ರಮ ಜರುಗಲಿದ್ದು ಪ್ರತಿಭಾವಂತರು ಕಲಾವಿದರು ಭಾಗಿಯಾಗುವರು.ಈ ಎಲ್ಲ ಕಾರ್ಯಕ್ರಮಗಳಿಗೆ ಜಿಲ್ಲೆಯ ಹಾಗೂ ನಾಡಿನ ಜನತೆ ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಹಾಗೂ ಶರಣರ ಸಂದೇಶಗಳನ್ನು ಪ್ರಚಾರಗೊಳಿಸಿ ಅವರ ತತ್ವದಡಿ ಜೀವನ ಸಾಗಿಸುವಂತಾಗಬೇಕು ಎಂದು ಎಲ್ಲ ಮಾಹಿತಿಗಳನ್ನು ಬಸವಕೇಂದ್ರ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ.ಕಾಯರ್ಾಧ್ಯಕ್ಷರಾದ ಡಾ| ಮೃತ್ಯುಂಜಯ ತುರುಕಾಣಿ.ಉಪಾಧ್ಯಕ್ಷರಾದ ಇಂದುಧರ ಯರೇಶಿಮಿ.ಸದಸ್ಯರುಗಳಾದ ನಾಗೇಂದ್ರ ಕಡಕೋಳ.ರುದ್ರೇಶ ಚಿನ್ನಣ್ಣನವರ. ಸಂಜೀವಕುಮಾರ ನೀರಲಗಿ.ಬಸವರಾಜ ಅರಬಗೊಂಡ ಅನೇಕರು ಪಾಲ್ಗೊಂಡಿದ್ದರು.