ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡನೀಯ: ನಮಾಜಕಟ್ಟಿ
ತಾಳಿಕೋಟಿ 24: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಭಯಾನಕ ದುರಂತವನ್ನು ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆಯ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಕಟುವಾಗಿ ಖಂಡಿಸಿದ್ದಾರೆ.
ಘಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಘಟನೆಯಲ್ಲಿ ಮಡಿದ ಅಮಾಯಕ ಹಾಗೂ ನಿರಪರಾಧಿಗಳ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತ ಈ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿ ಹಾಗೂ ಸಾಮರ್ಥ್ಯವನ್ನು ದೇವನು ದಯಪಾಲಿಸಲಿ ಎಂದು ಹೇಳಿ ಸರ್ಕಾರವು ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಮತ್ತು ಸಹಾಯವನ್ನು ಒದಗಿಸಬೇಕು, ಜೊತೆಗೆ ಈ ಹೇಯ ಹಾಗೂ ಅಮಾನವೀಯ ಕೃತ್ಯ ಎಸಗಿದ ಮಾನವ ವಿರೋಧಿ ಶಕ್ತಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಭದ್ರತಾ ಪಡೆಯಿಂದ ಸಂಭವಿಸಿದ ವೈಫಲ್ಯ ಹಾಗೂ ನಿರ್ಲಕ್ಷದ ಕುರಿತು ಪಾರದರ್ಶಕ ತನಿಖೆ ನಡೆಸಬೇಕು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಾಳ್ಮೆ ಹಾಗೂ ಸಯಂಮ ಕಾಪಾಡುತ್ತಾ ಶಾಂತಿ ಮತ್ತು ಸಾಮರ್ಥ್ಯವನ್ನು ಸ್ಥಾಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ ಎಂದು ಅವರು ತಿಳಿಸಿದರು.