ಮಹಾಲಿಂಗಪುರ 12: ಸಮೀಪದ ರನ್ನ ಬೆಳಗಲಿಯಲ್ಲಿ ನಡೆದ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಉದ್ದೇಶಿಸಿ ಮಾತನಾಡಿ ಪಟ್ಟಣದ ಹಲವು ಅಭಿವೃದ್ಧಿ ಕಾರ್ಯ ಮತ್ತು ಕೆರೆ ನಿರ್ಮಾಣ ಹಾಗೂ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಭಿವೃದ್ಧಿಯಲ್ಲಿ ಸ್ಥಳೀಯ ನಾಯಕ ಪಂಡಿತ ಪೂಜಾರ ಪಾತ್ರ ಅಪಾರವಾಗಿದೆ ಎಂದು ಹಿರಿಯ ಪತ್ರಕರ್ತರಾದ ಜಯರಾಮ್ ಶೆಟ್ಟರು ಪ್ರಶಂಶಿಸಿದರು.
ನಂತರ ನ್ಯಾಯವಾದಿ ಶ್ರೀಶೈಲ ದೊಡ್ಡಟ್ಟಿ ಮಾತನಾಡಿ ಕಲಿಯುವ ಹಂಬಲ ವಿದ್ಯಾರ್ಥಿಗಳಲ್ಲಿ ಬಂದರೆ ಕಲಿಸುವ ಸಾಹಸ ಪಾಲಕರು ಪೂರೈಸುತ್ತಾರೆ. ಇದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ಕೊಡಗೆ ನೀಡಿದರೆ ಸಂಘ ಸಂಸ್ಥೆಗಳು ಸಹಾಯ ಸಹಕಾರ ಕೊಡಬೇಕಾಗುತ್ತದೆ . ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಒಕ್ಕೂಟ ಶ್ರಮಿಸುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ಕಾಡಯ್ಯ ಗಣಾಚಾರಿ ಮಾತನಾಡಿ ಸೂಪರ್ ಶಿಕ್ಷಣ ಪಡೆದವರು ವಿಶ್ವ ಪ್ರಖ್ಯಾತರಾದ ಅನೇಕ ಉದಾಹರಣೆಗಳನ್ನು ಮೆಲಕು ಹಾಕಿ ನೀವು ಮುಂದಿನ ಸಾಲಿನಲ್ಲಿ ಎಸ್ ಎಸ್ ಎಲ್ ಸಿ,ಪಿಯುಸಿ, ಡಿಗ್ರಿಯಲ್ಲಿ ರನ್ ಜನಿಸಿದ ನಾಡಿಗೆ ಕೀರ್ತಿ ತನ್ನಿ ಎಂದು ಹೇಳಿದರು.
ಪಂಡಿತ್ ಪೂಜಾರ ಪ್ರಾಸ್ತಾವಿಕ ಮಾತನಾಡಿ ರನ್ನ ಬೆಳಗಲಿಯಲ್ಲಿ ಮುಂದಿನ ದಿನಗಳಲ್ಲಿ ಸಿಬಿಎಸ್ಸಿ ಐಸಿಎಸಈಐ ಮತ್ತು ರಾಜ್ಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ತರುವ ಮತ್ತು ಪಿಯುಸಿಯಲ್ಲಿ ವಿಜ್ಞಾನ ವಿಷಯ ಹಾಗೂ ಬಿಸಿಎ ಪಠ್ಯಕ್ರಮ ಅಳವಡಿಸಿಕೊಳ್ಳುವ ಪ್ರಯತ್ನದ ಜೊತೆಗೆ ಶಾಲೆಗೆ ಕೆಲವು ಕೊಠಡಿಗಳನ್ನು ಕಟ್ಟಿಕೊಡವ ಪ್ರಯತ್ನಿಸುವ ಭರವಸೆ ನೀಡಿದರು.
ಹಳೆ ವಿದ್ಯಾರ್ಥಿಗಳು ಸಂಘದ ಅಧ್ಯಕ್ಷ ಶಿವು ಗಾಣಿಗೇರ ಸ್ವಾಗತಿಸಿದರು.ಸಂತೋಷ ಕುಲಗೋಡ ವಂದಿಸಿದರು. ಶಿಕ್ಷಕರಾದ ಬಾಹುಬಲಿ ಗರಗದ ನಿರೂಪಿಸಿದರೆ ಪ್ರಾಚಾರ್ಯ ಪಿ ಎಚ ನಾಯಕ ವಿದ್ಯಾರ್ಥಿ ಗುಣಮಟ್ಟದ ಕುರಿತು ಮಾತನಾಡಿ ರಿಜೆಲ್ಟ್ ಘೋಷಿಸಿದರು. ವಿದ್ಯಾರ್ಥಿಗಳ ತಮ್ಮ ತಮ್ಮ ಹಂಚಿಕೆಗಳನ್ನು ಹಂಚಿಕೊಂಡರು.