ಆಧ್ಯಾತ್ಮ ಜ್ಞಾನ ಮತ್ತು ಧ್ಯಾನದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ: ಸುದೇಶ್ ದೀದಿಜಿ

Peace in the world can only be achieved through spiritual knowledge and meditation: Sudesh Didiji

ಕೊಪ್ಪಳ ಮೇ 24: ಆಧ್ಯಾತ್ಮ ಜ್ಞಾನ ಮತ್ತು ಧ್ಯಾನದಿಂದಲೇ ವಿಶ್ವದಲ್ಲಿ ಏಕತೆ, ಶಾಂತಿ,ಪರಸ್ಪರರಲ್ಲಿ ವಿಶ್ವಾಸ ಮೂಡಲು ಸಾಧ್ಯ ಎಂದು ಅಬು ಪರ್ವತದ ಬ್ರಹ್ಮಕುಮಾರಿಸ್ ಸಹ ಮುಖ್ಯ ಆಡಳಿತಾಧಿಕಾರಿ ಯಾಗಿರುವ ಪೂಜ್ಯನೀಯ ರಾಜಯೋಗಿನಿ ಬಿಕೆ  ಸುದೇಶ್ ದೀದಿಜಿ ಕರೆ ನೀಡಿದರು.  

ಅವರು ನಗರದ ದೇವರಾಜ ಅರಸ್ ಕಾಲೋನಿ ಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಏರಿ​‍್ಡಸಿದ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಮೆಡಿಟೇಶನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು, ಮುಂದುವರೆದು ಮಾತನಾಡಿ ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ ಪ್ರೇರಣಾದಾಯಿ ಸಂದೇಶ ಹಾಗೂ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಕಾರ್ಯಕ್ರಮ ವಸುದೈವ ಕುಟುಂಬಕಂ ಜಗತ್ತೇ ಒಂದು ಕುಟುಂಬ ಎಂಬ ಪ್ರಾಚೀನ ಭಾರತೀಯ ಆದರ್ಶದಿಂದ ಪ್ರೇರಿತರಾಗಿ ಬ್ರಹ್ಮಕುಮಾರಿ ಸಂಸ್ಥೆ ವರ್ತಮಾನ ಸಮಯದಲ್ಲಿ ಜಗತ್ತಿಗೆ ಬೇಕಾಗಿರುವುದು ವಿಶ್ವದಲ್ಲಿ ಏಕತೆ ಮತ್ತು ವಿಶ್ವಾಸ ಇದನ್ನು ಸಾಧಿಸಲು ಧ್ಯಾನವೊಂದೇ ಏಕೈಕ ಮಾರ್ಗ ಎಂದರು. ಜಾಗತಿಕ ಮಟ್ಟದಲ್ಲಿ ಏಕತೆ ಮತ್ತು ಪರಸ್ಪರರಲ್ಲಿ ವಿಶ್ವಾಸ ಜಾಗೃತವಾಗಲು ವ್ಯಕ್ತಿಯ ಆಂತರಿಕ ಪರಿವರ್ತನೆ ಬಹಳ ಮುಖ್ಯ ವಿಚಾರಗಳ ಪರಿವರ್ತನೆ ಅತ್ಯಗತ್ಯ ಈ ಶರೀರ ವಿನಾಶಿ ಈ ಶರೀರದೊಳಗಿರುವ ಆತ್ಮ ಅವಿನಾಶಿ ನಾವೆಲ್ಲ ಆತ್ಮ ಜ್ಯೋತಿಗಳು ಯಾವ ಜಾತಿ ವರ್ಣ, ಲಿಂಗ,ಪ್ರಾಂತ್ಯ,ಭೇದವಿಲ್ಲದೆ ನಾವೆಲ್ಲ ಆತ್ಮ ಜ್ಯೋತಿಗಳು ಪರಮಾತ್ಮನ ಮಕ್ಕಳು ವಿಶ್ವ ಪಿತನ ಸಂತಾನರು ಎಂಬ ಅರಿವು ಆತ್ಮ ಜಾಗೃತಿ ಆದಾಗ ವಿಶ್ವದಲ್ಲಿ ಪರಸ್ಪರರಲ್ಲಿರುವ ದ್ವೇಷ ಈರ್ಷೆ ಅಸೂಯೆ ಭಾವನೆಗಳು ದೂರವಾಗಿ ಪರಸ್ಪರರಲ್ಲಿ ಸ್ನೇಹ, ಪ್ರೀತಿ, ಸದ್ಭಾವನೆ ಸೋದರತ್ವದ ಭಾವನೆ ಮೂಡಿ ವಿಶ್ವದಲ್ಲಿ ಏಕತೆ ಮತ್ತು ವಿಶ್ವಾಸ ಸ್ಥಾಪನೆಯಾಗುತ್ತದೆ ಎಂದರು.  

ದಿವ್ಯ ಸಾನಿಧ್ಯವನ್ನು ವಹಿಸಿದ ರಾಜಯೋಗಿ ಡಾ. ಬಿ.ಕೆ ಬಸವರಾಜ್ ರಾಜಋಷಿಗಳು ಈಶ್ವರೀಯ ವಿಶ್ವ ವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕರು ಇವರು ಮಾತನಾಡುತ್ತಾ ವರ್ತಮಾನ ಸಮಯದಲ್ಲಿ ಜಗತ್ತಿನಾದ್ಯಂತ ವ್ಯಕ್ತಿ ವ್ಯಕ್ತಿಗಳಲ್ಲಿ ದೇಶ ದೇಶಗಳಲ್ಲಿ ಮಾತ್ರವಲ್ಲ ಒಂದು ಮನೆಯಲ್ಲಿ ಏಕತೆ ಇಲ್ಲ  ಪರಸ್ಪರ ಅಪನಂಬಿಕೆ ಸ್ವಾರ್ಥ ಮದ ಮತ್ಸರ ದಿನೇ ದಿನೇ ವೃದ್ಧಿ ಆಗುತ್ತಿದೆ. ಇಂತಹ ಪ್ರಕ್ಷುಬ್ದ ವಾತಾವರಣದಲ್ಲಿ ವಿಶ್ವದಲ್ಲಿ ಬೇಕಾಗಿರುವುದು ಶಾಂತಿ, ಏಕತೆ ವಿಶ್ವಾಸ ಇದು ಜಗತ್ತಿನಲ್ಲಿ ಸ್ಥಾಪನೆ  ಆಧ್ಯಾತ್ಮ ಶಿಕ್ಷಣದಿಂದ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ ಎಂದರು. ವ್ಯಕ್ತಿಯ ಸಂಸ್ಕಾರ ಪರಿವರ್ತನೆಯಿಂದಲೇ ವಿಶ್ವ ಪರಿವರ್ತನೆ ಸಾಧ್ಯ ಸಂಸ್ಕಾರ ಪರಿವರ್ತನೆಗೆ ಈಶ್ವರೀಯ ವಿಶ್ವ ವಿದ್ಯಾಲಯ ಆಧ್ಯಾತ್ಮ ಶಿಕ್ಷಣ ನೀಡುತ್ತಿದೆ ಎಂದರು.   

ಸಂಸದರಾದ ರಾಜಶೇಖರ್ ಹಿಟ್ನಾಳ್ ಮಾತನಾಡುತ್ತಾ ಜಗತ್ತಿನ ವಾತಾವರಣ ನೋಡಿದಾಗ ಮನುಷ್ಯ ಶಾಂತಿ ನೆಮ್ಮದಿಯನ್ನು ಪಡೆಯುವ ಸ್ಥಾನವನ್ನು ಹುಡುಕುವ ಪರಿಸ್ಥಿತಿ ಬಂದಿದೆ ಈ ನಿಟ್ಟಿನಲ್ಲಿ ಈಶ್ವರಿಯ ವಿಶ್ವವಿದ್ಯಾಲಯ ಜಗತ್ತಿನಾದ್ಯಂತ 140 ದೇಶಗಳಲ್ಲಿ ಸುಖ ಶಾಂತಿ ಪಡೆಯುವ ಸಹಜ ಮಾರ್ಗವನ್ನು ತೋರಿಸುವ ಇದರ ಸೇವೆ ಶ್ಲಾಘನೀಯ ಎಂದರು.  ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಮಾತನಾಡಿ ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತು, ಸ್ಥಾನ, ಅಧಿಕಾರ ಎಷ್ಟು ಮುಖ್ಯವೋ ಜೀವನದಲ್ಲಿ ಶಾಂತಿ ನೆಮ್ಮದಿಯು ಅಷ್ಟೇ ಮುಖ್ಯ ಎಂದರು. 

ದಿ, 25 ರಿಂದ 31ರ ವರೆಗೆ ಒತ್ತಡ ಮುಕ್ತತೆಗಾಗಿ ರಾಜಯೋಗ ಮೆಡಿಟೇಶನ್ ತರಬೇತಿ  ಕಾರ್ಯಕ್ರಮ ಬ್ರಹ್ಮಕುಮಾರೀಸ್ ಸಭಾಭವನದಲ್ಲಿ ಏರಿ​‍್ಡಸಲಾಗಿದೆ ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಯೋಗಿನಿ ಅಕ್ಕ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ  ಮಾತನಾಡುತ್ತಾ ಮನುಷ್ಯನಿಗೆ ಎಲ್ಲಾ ತಿಳುವಳಿಕೆ ಇದೆ ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಶಕ್ತಿ ಬೇಕು ಅದು ಧ್ಯಾನದಿಂದ ಮಾತ್ರ ಸಿಗುತ್ತದೆ ಎಂದು ತಿಳಿಸಿದರು.  ಉಪ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡುತ್ತ ಶ್ರೇಷ್ಠ ಸಂಕಲ್ಪ ಶಕ್ತಿ ಮಹಾನ್ ಕಾರ್ಯವನ್ನು ನಮ್ಮಿಂದ ಮಾಡಿಸುತ್ತದೆ ನಮ್ಮ ಸಂಕಲ್ಪಗಳು ಸಕಾರಾತ್ಮಕತೆಯ ಕಡೆಗೆ ಸಾಗಬೇಕು ಎಂದರು. 

ಬಿಕೆ ಜಯಂತಿ ಅಕ್ಕನವರು ಪ್ರಾಯೋಗಿಕ ಧ್ಯಾನ ಮಾಡಿಸಿದರು. ವೇದಿಕೆ ಮೇಲೆ ತಹಶೀಲ್ದಾರ ವಿಠಲ ಚೌಗುಲ ಜೆಡಿಎಸ್ ಪಕ್ಷದ ಮುಖಂಡ ಹಾಗೂ ಸಮಾಜ ಸೇವಕ ಸಿವಿ ಚಂದ್ರಶೇಖರ್ ಉಪಸ್ಥಿತರಿದ್ದರು.  ಬಿಕೆ ರಶ್ಮಿ ಅಕ್ಕ ಕಾರ್ಯಕ್ರಮ ನಿರೂಪಿಸಿದರು.