ಒಳ ಮೀಸಲಾತಿ ಜಾರಿಗೆ ಜನರಿಗೆ ಅರಿವು ಅಗತ್ಯ
ಹೊಸಪೇಟೆ 11: ಅಮರಾವತಿ ಐ.ಬಿಯಲ್ಲಿ ವಿಜಯನರ ಜಿಲ್ಲೆ ಛಲವಾದಿ ಮಹಾಸಭದ ಜಿಲ್ಲಾ ಸಮಿತಿ ವಿಸ್ರುತ ಸಭೆ ಅಯೋಜಿಸಲಾಗಿತ್ತು. ಈ ಸಭೆಗೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಮುಖಂಡರು ಪಾಲ್ಗೋಂಡಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ಒಳ ಮೀಸಲಾತಿ ವಿಷಯಕ್ಕೆ ಸಂಭಂದಿಸಿದ ಹಾಗೆ ಜಸ್ಟೀಸ್ ನಾಗಮೋಹನ್‌ದಾಸ್ ಅವರ ಅಯೋಗವು ಮನೆ ಮನೆ ಬೇಟಿ ನೀಡಿ ಜಾತಿ ಜನಗಣತಿ ಮಾಡುವ ಸಂಧರ್ಭದಲ್ಲಿ ಪ್ರತಿಗ್ರಾಮದಲ್ಲಿರುವಛಲವಾದಿ ಸಮುದಾಯಗಳ ಜನರಿಗೆಅರಿವು ಮೂಡಿಸಿ ಜಾತಿ ಕಲಂ ನಲ್ಲಿ ಛಲವಾದಿ ಅಥವಾ ಹೊಲೆಯ ಎಂದು ನಮುದಿಸಬೇಕೆಂದು ತಿಳಿಸಲಾಯಿತು ಮತ್ತು ಬಾಬಾಸಹೇಬ್‌ಅಂಬೇಡ್ಕರ್‌ಅವರ 134ನೇ ಜಯಂತಿಯನ್ನ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ವಿಜೃಂಭಣೆಯಿಂದಆಚರಿಸಲು ಮತ್ತು ಇದಾದ ನಂತರ ಮುಂದಿನ ತಿಂಗಳು ಜಿಲ್ಲಾ ಮಟ್ಟದಲ್ಲಿಅಂಬೇಡ್ಕರ್‌ಜಯಂತಿಯನ್ನುಎಲ್ಲಾ ಸಮುದಾಯಗಳನ್ನು ಒಳಗೂಡಿಸಿಕೊಂಡು ಅತ್ಯಂತಅರ್ಥಪೂರ್ಣವಾಗಿಜಯಂತಿಯನ್ನುಆಚರಿಸುವ ಬಗ್ಗೆ ಮತ್ತುಇತರೆದಲಿತರು ಗ್ರಾಮಗಳಲ್ಲಿ ಅನುಭವಿಸುವ ಸಮಸ್ಯೆಗಳ ವಿಷಯಕ್ಕೆ ಸಂಬಂಧಿಸಿದ ಹಾಗೆ ಸುಧೀರ್ಘಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾಅಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ ಹಿರಿಯರದಗುಂಡಗತ್ತಿಕೊಟ್ರ್ಪ, ಜಿಲ್ಲಾ ಖಜಾಂಚಿಗಳಾದ ಜೆಸಿ ಈರಣ್ಣ, ಸಣ್ಣಈರ್ಪ, ರಾಮಚಂದ್ರ ಬಾಬು, ಮರಿಸ್ವಾಮಿ, ಕೂಡ್ಲಿಗಿತಾಲೂಕುಅಧ್ಯಕ್ಷರಾದ ಮಾರ್ಪ, ನಿವೃತ್ತ ಶಿಕ್ಷಕರಾದ ಚಂದ್ರಶೇಖರ, ಪ್ರಭಾಕರ್, ಛಲವಾದಿ ಕೇರಿ ಮುಖಂಡರಾದ ಮುದುಕಪ್ಪ, ರಾಮಕೃಷ್ಣ, ಟಿ ಬಿ ಡ್ಯಾಮ್‌ರಮೇಶ್, ಶಿಕ್ಷಕರಾದ ಸುಗ್ಗನಳ್ಳಿ ರಮೇಶ್, ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್, ಹರಪನಹಳ್ಳಿಯ ಸಿ.ಅಜ್ಜಯ, ಕೊಟ್ರೇಶ್, ಹಗರಿಬೊಮ್ಮನಹಳ್ಳಿಯ ಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯರಾದರಮೇಶ್‌ಇನ್ನುಇನ್ನು ಮುಂತಾದವರು ಸೇರಿ ಸಭೆಯನ್ನು ಯಶಸ್ವಿಗೊಳಿಸಿದರು.