ವ್ಯಕ್ತಿ ಮತ್ತು ಜೀವ ಶಾಶ್ವತ ವಲ್ಲ, ವ್ಯಕ್ತಿತ್ವ ಹಾಗೂ ವಿಚಾರ ಶಾಶ್ವತ - ಡಾ, ಪ್ರಿಯಾ ಹರೀಶ್
ಕೊಪ್ಪಳ 12: ಮಹಿಳೆಯರು ಅಕ್ಕಮಹಾದೇವಿ ದಂತಹ ಅನೇಕ ಮಹಾನ್ ನಾಯಕಿಯರ ಆದರ್ಶ ಪಾಲಿಸುವುದರ ಜೊತೆಗೆ ಆತ್ಮ ವಿಶ್ವಾಸದ ಬದುಕು ಕಟ್ಟಿಕೊಳ್ಳಬೇಕು, ಜೀವನದಲ್ಲಿ ವ್ಯಕ್ತಿ ಶಾಶ್ವತವಲ್ಲ ಬದಲಾಗಿ ವ್ಯಕ್ತಿತ್ವ ಶಾಶ್ವತ , ಜೀವ ಶಾಶ್ವತವಲ್ಲ ಬದಲಾಗಿ ವಿಚಾರ ಶಾಶ್ವತವಾಗಿದೆ ಎಂದು ದಕ್ಷಿಣ ಕನ್ನಡ ಮಂಗಳೂರಿನ ಕುಡ್ಲ ತುಳು ಚಾನಲ್ ನ ವಾರ್ತಾವಾಚಕಿ ಡಾ, ಪ್ರಿಯಾ ಹರೀಶ್ ಹೇಳಿದರು. ಅವರು ಶನಿವಾರ ನಗರದ ಕೋಟೆ ರಸ್ತೆಯಲ್ಲಿರುವ ಮಹೇಶ್ವರ ಮಂದಿರದ ಸಭಾಂಗಣದಲ್ಲಿ ಶ್ರೀ ಅಕ್ಕಮಹಾದೇವಿ ಮಂಡಳ ಏರಿ್ಡಸಿದ ಶ್ರೀ ಅಕ್ಕಮಹಾದೇವಿ ಯವರ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಂದುವರಿದು ಮಾತನಾಡಿ ಮನುಷ್ಯನ ಜೀವ ಶಾಶ್ವತವಲ್ಲ ವಿಚಾರ ಶಾಶ್ವತವಾಗಿದೆ ಒಳ್ಳೆಯ ವಿಚಾರ ಒಳ್ಳೆಯ ಸಂದೇಶ ಸಮಾಜಕ್ಕೆ ನೀಡುವಂತಹ ಆತ್ಮ ವಿಶ್ವಾಸದ ಬದುಕು ನಮ್ಮದಾಗಬೇಕು ಏನೇ ಸಮಸ್ಯೆ ಬಂದರೂ ಅದಕ್ಕೆ ಎದೆಗೊಂದದೆ ಧೈರ್ಯದಿಂದ ಎದುರಿಸಿ ನೇರ ಸ್ಪಂದನೆ ನೀಡುವುದರ ಮೂಲಕ ಇತ್ಯರ್ಥ ಮಾಡಿಕೊಂಡು ನಮ್ಮ ನಮ್ಮ ಬದುಕು ಹಸನ ಮಾಡಿಕೊಳ್ಳಬೇಕು. ಆತ್ಮ ವಿಶ್ವಾಸದ ಬದುಕು ನಮ್ಮದಾಗಬೇಕು ಅಕ್ಕಮಹಾ ದೇವಿ ಯವರ ಆದರ್ಶಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ದರು ,ಅಲ್ಲದೆ ಇಲ್ಲಿನ ಮಹಿಳಾ ಮಂಡಳಿಯ ಸಮಾಜ ಸೇವಕಾರ್ಯ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ದಕ್ಷಿಣ ಕನ್ನಡ ಮಂಗಳೂರಿನ ಕುಡ್ಲ ತುಳು ಚಾನಲ್ ವಾರ್ತಾವಾಚಕಿ ಡಾ, ಪ್ರಿಯಾ ಹರೀಶ್ ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಮಂಗಳೂರಿನ ಕೃಷಿ ಕ್ಷೇತ್ರದ ಸಾಧಕ ಶಿಕ್ಷಣ ಇಲಾಖೆಯ ಡಾ, ಕೃಷ್ಣಪ್ಪಗೌಡ ಪಡ್ಡಂ ಬೈಲ್ ರವರು ಮಾತನಾಡಿ ಸಾಮಾಜಿಕ ಸಾಹಿತಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಅಪಾರ ಕ್ಷೇತ್ರವಾಗಿದೆ ಇದರಲ್ಲಿ ನಡೆ ದಷ್ಟು ದಾರಿ, ಪಡೆದಷ್ಟು ಭಾಗ್ಯ ಸಿಗಲಿದೆ ಎಂದ ಅವರು ಕೊಪ್ಪಳದ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಬೇಕು ಎಂದರು, ಇದೆ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು, ಸಂಚಿಕೆ ಕುರಿತು ಕೊಪ್ಪಳದ ಹಿರಿಯ ಸಾಹಿತಿ ಗಳಾದ ಎಸ್ ಎಂ ಕಂಬಾಳಿಮಠ ಮತ್ತು ಮಹೇಶ್ ಮನ್ನಾಪುರ ರವರು ಮಾತನಾಡಿದರು. ನವ ಪ್ರಗತಿ ಮಹಿಳಾ ಮಂಡಳದ ಉಪಾಧ್ಯಕ್ಷರಾದ ಚಂದಾ ಅಗಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಹಿಳೆಯರ ಮತ್ತು ಮಹಿಳಾ ಸಂಘಟನೆಗಳ ಜವಾಬ್ದಾರಿ ಕುರಿತು ಮಾತನಾಡಿದರು, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲದ ಅಧ್ಯಕ್ಷರಾದ ಕೋಮಲಾ ಕುದುರೆಮೋತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ ಕಳೆದ 25 ವರ್ಷಗಳಿಂದ ಮಹಿಳಾ ಮಂಡಳದಿಂದ ಉತ್ತಮ ಸಮಾಜ ಸೇವಾ ಕಾರ್ಯ ನಡೀತಾ ಇದೆ ಇದಕ್ಕೆ ಕಳೆದ ಸಾಲಿನಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಕೂಡ ಲಭಿಸಿರುವುದು ಮಹಿಳಾ ಮಂಡಳಕ್ಕೆ ಹೆಮ್ಮೆಯ ವಿಷಯವಾಗಿದೆ ,ತಮಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅವರು ಅಭಿನಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಂಸದ ಕೆ ರಾಜಶೇಖರ್ ಹಿಟಾಳ್ ರವರು ಭೇಟಿ ಮಾಡಿ ಅಕ್ಕಮಹಾದೇವಿ ಮಹಿಳಾ ಮಂಡಳಕ್ಕೆ ಶುಭ ಕೋರಿ ತೆರಳಿದರು, ಅವರಿಗೆ ಕಾರ್ಯಕ್ರಮದ ಪರವಾಗಿ ಸನ್ಮಾನಿಸಲಾಯಿತು, ವೇದಿಕೆ ಮೇಲೆ ಶಿಕ್ಷಕ ಮತ್ತು ಸಾಹಿತಿ ಶ್ರೀನಿವಾಸ್ ಚಿತ್ರಗಾರ ಪತ್ರಕರ್ತ ಎಂ ಸಾಧಿಕ ಅಲಿ ಉಪಸ್ಥಿತರಿದ್ದು ಅನ್ನಪೂರ್ಣಮ್ಮ ಮನ್ನಪೂರ್, ವಿಜಯಲಕ್ಷ್ಮಿ ಮುದ್ಗಲ್ ರವರು ಆರಂಭದಲ್ಲಿ ಪ್ರಾರ್ಥನೆ ಗೀತೆ ಹಾಡಿದರೆ, ಜ್ಯೋತಿ ವಡ್ಡಟ್ಟಿ ಅವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಗೀತಾ ಇಟಗಿ ಮತ್ತು ಲಲಿತಾ ಗುತ್ತಿ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರೆ ಪೂರ್ಣಿಮಾ ಶೆಟ್ಟರ್ ಅವರು ಕೊನೆಯಲ್ಲಿ ವಂದಿಸಿದರು,