ಆಶಾ ನಾಯಕಗೆ ಪಿಎಚ್‌ಡಿ ಪ್ರದಾನ

PhD award to Asha Nayak

ಬೆಳಗಾವಿ 13: ಜಿಲ್ಲೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ಆಶಾ ನಾಯಕ ಅವರು ಮಂಡಿಸಿದ ಅಗ್ರಿಕಲ್ಚರಲ್ ವಿಮೆನ್ ಲೇಬರ್ ಇನ್ ಕರ್ನಾಟಕ: ಅ ಕೇಸ್ ಸ್ಟಡಿ ಆಫ್ ಬೆಳಗಾವಿ ಡಿಸ್ಟ್ರಿಕ್ಟ್‌ ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಇಲಾಖೆಯ ಸಚಿವ ಡಾ. ಎಂ.ಸಿ .ಸುಧಾಕರ್, ಕುಲಪತಿಗಳು ಪ್ರೊ.ಸಿ.ಎಂ.ತ್ಯಾಗರಾಜ್, ಕುಲಸಚಿವ ಸಂತೋಷ್ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ್ ಎನ್‌. ಕದಂ ಹಾಗೂ ಹಣಕಾಸು ಅಧಿಕಾರಿಗಳು ಎಂ.ಎ.ಸಪ್ನಾ ಇವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಡಿ .ಎನ್‌. ಪಾಟೀಲ್ ಅವರು ಮಾರ್ಗದರ್ಶನ ನೀಡಿದ್ದರು.