ಲೋಕದರ್ಶನವರದಿ
ಧಾರವಾಡ೦೬ : ಕರುನಾಡಿನ ಹನ್ನೇರಡನೇಯ ಶತಮಾನದಲ್ಲಿ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ ಸಮಾಜಸುಧಾರಕ ಜಗಜ್ಯೋತಿ ಬಸವಣ್ಣನವರ ಜಯಂತಿ ಪ್ರಯುಕ್ತ ಧಾರವಾಡದ ಗಣಕರಂಗ ಸಂಸ್ಥೆಯು ನಾಳೆ (ಮೇ.7) ಧಾರವಾಡದ ಕನರ್ಾಟಕ ವಿದ್ಯವರ್ಧಕ ಸಂಘದ ರಾಹದೇ ಸಭಾಭವನದಲ್ಲಿ "ಅಣ್ಣ-ಬಸವಣ್ಣ" ವಿಷಯದ ಕುರಿತು ಕವಿಗೋಷ್ಟಿ ಆಯೋಜಿಸಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸುಮಾರು ಮೂವ್ವತ್ತು ಆಹ್ವಾನಿತ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಧಾರವಾಡದ ಸಾಹಿತಿ ಡಾ.ಮಲ್ಲಿಕಾಜರ್ುನ ಗುಮ್ಮಗೊಳ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಕವಿವ ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಶ್ರೀ ಪ್ರಕಾಶ ಉಡಕೇರಿ ಆಗಮಿಸಲಿದ್ದಾರೆ. ಇವರೊಂದಿಗೆ ವೇದಿಕೆಯಲ್ಲಿ ಬಸವಾನುಯಾಯಿಗಳು ಮತ್ತು ಯುವಕವಿ ಶರಣು ಗೊಲ್ಲರ ಉಪಸ್ಥಿತರಿರುವರು.
ಕಾರ್ಯಕ್ರಮದ ನಿರ್ವಹಣೆಯನ್ನು ರಂಗಕಮರ್ಿ ಹಿಪ್ಪರಗಿ ಸಿದ್ಧರಾಮ ಮಾಡಲಿದ್ದಾರೆ. ತೀವ್ರ ಆಸಕ್ತಿದಾಯಕ ವಿಷಯದ ಕವಿಗೋಷ್ಟಿಗೆ ಸರ್ವರಿಗೂ ಸ್ವಾಗತವಿದೆ ಎಂದು ಕಾರ್ಯಕ್ರಮ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ 9902674005 ಮತ್ತು 9845109480 ಸಂಖ್ಯೆಗೆ ಸಂಪಕರ್ಿಸಬಹುದು.