ವೀಕ್ಷಕರ ಕಣ್ಮನ ಸೆಳೆದ ಪ್ರತಿಭಾ ಕಾರಂಜಿ

ಎಚ್30-ಬಿಎಎಲ್ಎಚ್2 ಬೈಲಹೊಂಗಲ ಎಂಸ್ಸೆಸ್ಸೆಆರ್ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರ

 

ಬೈಲಹೊಂಗಲ 31: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಶಿಕ್ಷಣ ಇಲಾಖೆಯಿಂದ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.

     ಪ್ರಾಥಮಿಕ, ಪ್ರೌಢಶಾಲೆಗಳ ನೂರಾರು ವಿದ್ಯಾಥರ್ಿಗಳು ಹೊಸ ಉರುಪು, ಹುಮ್ಮಸ್ಸಿನಿಂದ ಸ್ಪಧರ್ೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹೊರ ಸೂಸಿದರು. ಬಾಲಕ, ಬಾಲಕಿಯರು ಕೋಲಾಟ, ಕೊರವಂಜಿ, ಜಾನಪದ ನೃತ್ಯ, ವಚನ ಗಾಯನ, ನೃತ್ಯ, ಭರತನಾಟ್ಯ, ಭಕ್ತಿ ಗೀತೆ, ಭಾವಗೀತೆ, ಮಿಮಿಕ್ರಿ, ಫ್ಯಾನ್ಸಿ ಡ್ರೈಸ್ಸ್ ತೊಟ್ಟು ಮಿಂಚಿದರು. ಬಹುತೇಕ ಬಾಲಕರು ಕೈಯಲ್ಲಿ ಕೊಳಲು ಹಿಡಿದು ಕೃಷ್ಣನ ಪಾತ್ರದಲ್ಲಿ ಮಿಂಚಿದರೆ ಬಾಲಕಿಯರು ರಾಧೆ ವೇಷತೊಟ್ಟು ರಂಜಿಸಿದರು. ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದರ ವೇಷಭೂಷಣದ ವಿವಿಧ ವಿನ್ಯಾಸದ ಉಡುಗೆ, ತೊಡುಗೆ ತೊಟ್ಟು ಎಲ್ಲರ ಗಮನ ಸೆಳೆದರು. ಪ್ರತಿಯೊಬ್ಬ ಬಾಲಕ, ಬಾಲಕಿಯರ ವೇಷಭೂಷನ ನೋಡುಗರ ಮನ ಸೆಳೆಯಿತು. ಎಲ್ಲ ವಿದ್ಯಾಥರ್ಿಗಳು ತಮಗೆ ವಹಿಸಿಕೊಟ್ಟ ಸ್ಪಧರ್ೆಗಳಲ್ಲಿ ಶಿಸ್ತಿನಿಂದ ಭಾಗವಹಿಸಿ ಯಶಸ್ವಿಗೊಳಿಸಿದರು. 

    ಕ್ಷೇತ್ರಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪುರಸಭೆ ಉಪಾಧ್ಯಕ್ಷ ನಿಸ್ಸಾರಅಹ್ಮದ ತಿಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಗೌಡ ಪಾಟೀಲ, ಮುಖ್ಯಶಿಕ್ಷಕ ಎಸ್.ಬಿ.ಬೋರಕನವರ, ದೈಹಿಕ ಶಿಕ್ಷಕ ಬಸವರಾಜ ಭರಮನ್ನವರ, ಪಿ.ಸಿ.ಮಾಸ್ತಿಹೊಳಿ, ಆರ್.ಆರ್.ದೊಡಗೌಡರ, ಸಿ.ಎಸ್.ತಾಳಿಕೋಟಿಮಠ, ಡಿ.ವಿ.ಗೌಡಪ್ಪನವರ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ವಿ.ಗೋಕಾಕ, ಎಂ.ಎಂ.ಕೋಲಕಾರ ಸೇರಿದಂತೆ 54 ಶಾಲೆಗಳ ಶಿಕ್ಷಕ, ಶಿಕ್ಷಕಿಯರು, ಮುಖ್ಯಶಿಕ್ಷಕರು, ವಿದ್ಯಾಥರ್ಿಗಳು ಇದ್ದರು. ಎಂ.ಬಿ.ಗಣಾಚಾರಿ ಪ್ರಾಥರ್ಿಸಿದರು. ಪಿ.ಪಿ.ಸೊಂಟಕ್ಕಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು.