ಕಾಂಗ್ರೆಸ್ ಪಕ್ಷದ ಬಾವುಟ ಜಿಲ್ಲೆಯಲ್ಲಿ ಹಾರಿಸಲು ವೇದಿಕೆ ತಯಾರಿ: ತಂಗಡಗಿ

ಲೋಕದರ್ಶನ ವರದಿ

ಕೊಪ್ಪಳ 09: ಇದೇ ಡಿ. 10ರಂದು ಶಕ್ತಿ ಪ್ರಾಜೆಕ್ಟ್ ಕಾಯರ್ಾಗಾರ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಉದ್ಘಾಟಿಸಲಿದ್ದು, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಿತ್ತು ಹೊರ ಹಾಕಲು ಕಾಂಗ್ರೆಸ್ ಪಕ್ಷವು ಕಾರ್ಯಕರ್ತರಿಗೆ ಹಾಗೂ ಪಕ್ಷದ ಎಲ್ಲ ನಾಯಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಪೈಪೋಟಿಗ ವೇದಿಕೆಯನ್ನು ಸಿದ್ದ ಗೊಳ್ಳಿಸಲಾಗುವುದು    ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ .ಎಸ್. ತಂಗಡಗಿ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಹಾಗೂ ದಿಕ್ಸೂಚಿ ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಲಾಗುತ್ತಿದೆ, ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಮನಸ್ಥಾಪ ಹಾಗೂ ಒಳ ಜಗಳ ಇಲ್ಲ ನಾವು ಒಂದೇ ಕುಟುಂಬದ ಸದಸ್ಯರು ಒಗಟ್ಟಾಗಿ ಪಕ್ಷಕ್ಕೆ ದುಡಿಯುವ ಇಚ್ಚಾಶಕ್ತಿಯನ್ನು ಹೊಂದಿದ್ದೆವೆ, ಭಿನಾಭಿಪ್ರಾಯದ ಮಾತು ದೂರದ ಸಂಗತಿ ಜಿಲ್ಲಾಧ್ಯಕ್ಷನಾದ ಮತ್ತು ನಮ್ಮ ಪಕ್ಷದ ಹಿರಿಯ ಮುಖಂಡ ಹಾಗೂ ಕಾರ್ಯಕರ್ತರ ಮಾರ್ಗದರ್ಶನ, ಸಲಹೆಯನ್ನು ಪಡೆದು ಜಿಲ್ಲಾ ಕಾಂಗ್ರೆಸ್ ಸಮಿತಿಯು ಪಕ್ಷವನ್ನು ಬಲವರ್ಧನೆ ಮಾಡುವ ಕಾರ್ಯವನ್ನು ಮಾಡುತ್ತದೆ ಎಂದು ತಿಳಿಸಿದರು.

ಡಿ 10ರಂದು ಶಕ್ತಿ ಪ್ರಾಜೆಕ್ಟ್ ಕಾರ್ಯಗಾರ: ನಗರದ ಶಿವಶಾಂತವೀರ ಮಂಗಳ ಭವನದಲ್ಲಿ ಡಿ.10 ರಂದು ಶಕ್ತಿ ಪ್ರಾಜೆಕ್ಟ್ ಕಾರ್ಯಗಾರವನ್ನು ನಿಗದಿಗೊಳ್ಳಿಸಲಾಗಿದ್ದು ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಕಾರ್ಯಗಾರವನ್ನು ಉದ್ಘಾಟಿಸಲಿದ್ದು, ಶಕ್ತಿ ಕಾರ್ಯಕ್ರಮದ ರೂಪರೇಷಗಳ ವಿವರಣೆಯನ್ನು ಸುರಜ್ ಹೆಗಡೆ ನೀಡುವರು, ಅಲ್ಲದೇ ಪಕ್ಷದ ಸಂಘಟನೆ ಕುರಿತು ಶ್ರೀಧರ್ ಕಲ್ವೀರ್ ಸಲಹೆ ನೀಡುವರು, ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಬಿ.ಎಲ್.ಶಂಕರ್ ಹುರಿದುಂಬಿಸುವರು ಎಂದು ಹೇಳಿದರು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಕೆಪಿಸಿಸಿ ಜಿಲ್ಲಾ ಸದಸ್ಯರು, ಬ್ಲಾಕ್ ಮತ್ತು ತಾಲೂಕ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಸೇರಿದಂತೆ ಮುಂಚೂಣಿ ಘಟಕಗಳು ಮತ್ತು ಜಿಲ್ಲೆಯ ಪಕ್ಷದ ಎಲ್ಲಾ ಚುನಾಯಿತ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಇನ್ನೂ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷವು ಸುಳ್ಳು ಹೇಳುವ ಕೆಲಸವನ್ನು ಬಿಟ್ಟರೆ ಮತ್ತೆ ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ, ಇದಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠವನ್ನು ಕಲಿಸುತ್ತಾರೆ, ಸಂಸದ ಸಂಗಣ್ಣ ಕರಡಿ ಜಿಲ್ಲೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಜಿಲ್ಲೆಯಲ್ಲಿ ಒಬ್ಬ ಸಂಸದ ಇದ್ದಾರೆ ಎನ್ನುವುದನ್ನು ಜನರು ಮರೆತು ಹೋಗಿದ್ದಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಸದ ಕರಡಿಯನ್ನು ಕಾಡಿಗೆ ಕಳಿಸುವ ಕಾಂಗ್ರೆಸ್ ಪಕ್ಷವು ಮಾಡುತ್ತದೆ ಎಂದು ಪ್ರಹಾರ ನಡೆಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ, ಪಕ್ಷದ ಮುಖಂಡರಾದ ಮಾನ್ವಿ ಪಾಷ, ಮತ್ತು ಪಕ್ಷದ ಜಿಲ್ಲಾ ವಕ್ತಾರ ರವಿ ಕುರುಗೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.