ಯುವ ಸಾಹಿತಿ ದೊಡ್ಡಚಿಕ್ಕಣ್ಣನವರಿಗೆ ಪ್ರಶಸ್ತಿ ಪ್ರದಾನ

ರಾಣೇಬೆನ್ನೂರು-ಸೆ.9: ನಗರದ ಸಾಹಿತಿ ಹಾಗೂ ನ್ಯಾಯವಾದಿ ಎಸ್.ಡಿ.ದೊಡ್ಡಚಿಕ್ಕಣ್ಣನವರ ಇವರ ಸಾಹಿತ್ಯ ಕೃಷಿಯ ಸಾಧನೆ ಪರಿಗಣಿಸಿ, ಹುಬ್ಬಳ್ಳಿಯ ಚೇತನ ಪ್ರಕಾಶನ ಇವರು ಕೊಡ ಮಾಡುವ ಪ್ರಸಕ್ತ ಸಾಲಿನ ಚೇತನ ಸಾಹಿತ್ಯ ಸಂಭ್ರಮ ಪ್ರಶಚಿಸ್ತಿ ಭಾಜನರಾದ ಪ್ರಯುಕ್ತ ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಚೇತನ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿತು.

 ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ, ಸಂಚಾಲಕಿ ಮಂಜುಳಾ ಮೃತ್ಯುಂಜಯ, ಸವಿತಾ ಲಮಾಣಿ, ಚಂದ್ರಶೇಖರ ಮಾಡಲಗೇರಿ ಮತ್ತು ಪದಾಧಿಕಾರಿಗಳು ಚೇತನ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿದರು.