ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಆದ್ಯತೆ: ಶಾಸಕ ವಿಶ್ವಾಸ ವೈದ್ಯ

Priority given to development of rural areas of constituency: MLA Vishwas Vaidya

ಯರಗಟ್ಟಿ, 07 : ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.                    

ಸಮೀಪದ ಸತ್ತಿಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಲೋಕೋಪಯೋಗಿ ಇಲಾಖೆಯಡಿ ಬುಧವಾರ ಹಮ್ಮಿಕೊಂಡಿದ್ದ 1ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ದಿ ಕಾರ್ಯಗಳಿಗೆ ಜನರ ಹಾಗೂ ಕಾರ್ಯಕರ್ತರು ಸಹಕಾರ ನೀಡಬೆಕು ಎಂದರು. 

ಕಾಂಗ್ರೆಸ ಮುಖಂಡ ಪ್ರಕಾಶ ವಾಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಪಟ್ಟಣ ಸೇರಿದಂತೆ ಗ್ರಾಮೀಣ ರಸ್ತೆಗಳ ದುರಸ್ತಿಗೆ ಶಾಸಕರು ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಹೇಳಿದರು. ಗ್ರಾಮಸ್ಥರು ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಿದರು.  

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಗ್ರಾಪಂ ಸದಸ್ಯ ಮೀನಾಕ್ಷಿ ಮಾಗುಂಡನ್ನವರ, ನೀಲಮ್ಮ ಭಜಂತ್ರಿ, ರಾಜು ಸೋಮನ್ನವರ, ಲಕ್ಷ್ಮಿ ನಾಗಮ್ಮನವರ, ಕಾಂಗ್ರೆಸ ಮುಖಂಡ ಉಮೇಶ ಮಾಗುಂಡನ್ನವರ, ಪಿಡಿಒ ಎ. ಬಿ. ಬಂಗಾರಿ, ಬಸವರಾಜ ಆಯಟ್ಟಿ, ಗುರ​‍್ಪ ಶೆಟ್ಟರ, ಶ್ರೀಕಾಂತಯ್ಯ ಮಠಪತಿ, ಕಳಸಪ್ಪ ಕಳಸನ್ನವರ, ಮಣ್ಣಪ್ಪ ಪಟ್ಟಪ್ಪನವರ, ರಫೀಕ ಮುಲ್ಲಾ, ಶ್ರೀಶೈಲ ಸಂಗಪ್ಪನವರ, ಬಂಗಾರೆಪ್ಪ ಹರಳಿ, ಚನ್ನಪ್ಪ ಶೆಟ್ಟರ, ಮುಗಬಶೀರ ಬಾಗವಾನ, ಮಲ್ಲಪ್ಪ ಹೆಗಡೆ, ಉಮೇಶ ಪಾಟೀಲ, ಲೋಕೋಪಯೋಗಿ ಅಧಿಕಾರಿ ಫಕ್ಕೀರಗೌಡ ಪಾಟೀಲ, ಲಕ್ಕಪ್ಪ ನಾಗಮನ್ನವರ, ಪ್ರವೀಣ ರಾಮಪ್ಪನವರ, ಅಶೋಕ ರಾಯರ, ಬಾಪು ನದಾಫ್ ಸೇರಿದಂತೆ ಇತರರು ಇದ್ದರು. 

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯೂ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಯ ಮೇಲೆ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ. ಭಾರತದ ದಾಳಿಗೆ 80ಕ್ಕೂ ಹೆಚ್ಚು ಪಾಕ್ ಉಗ್ರರು ಮೃತಪಟ್ಟಿದ್ದಾರೆ. ನಮ್ಮ ಭಾರತೀಯ ಸೈನಿಕರಿಗೆ ಧನ್ಯವಾದಗಳು. 

ಶಾಸಕ ವಿಶ್ವಾಸ ವೈದ್ಯ, ಸವದತ್ತಿ