ಹಾರೂಗೇರಿ 17: ಅಥಣಿ ತಾಲೂಕಿನ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯ ಪ್ರತಿಭಾನ್ವಿತ ಬಾಲಕಿ ಪ್ರಿಯಾ ಮುತ್ತಪ್ಪ ಮುದವಿ ಮೇಘಾ ಪ್ರೌಢ ಶಾಲೆ(ನಾಗನೂರ)ಮೂಡಲಗಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾಳೆಂದು ಮುಖ್ಯ ಉಪಾಧ್ಯಾಯ ರವೀಂದ್ರ ಪಾಟೀಲ ಸವಿ ಸಂಗತಿ ತಿಳಿಸಿದ್ದಾರೆ.
ಪ್ರಿಯಾ ಮುದವಿ ಸಾಧನೆಯನ್ನು ಕೊಂಡಾಡಿದ ಎಸ್. ಡಿ. ಎಮ್. ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ, ಸದಸ್ಯರು, ಗುರುಗಳು, ಊರ ಹಿರಿಯರು, ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.