ಜಾತ್ರಾ ನಿಮಿತ್ಯ ಜರುಗಿದ ಶರ್ಯತ್ತುಗಳ ವಿಜೇತರಿಗೆ ಬಹುಮಾನ ವಿತರಣೆ

Prize distribution to the winners of the competitions held on the occasion of the fair

ರಾಯಬಾಗ, 07 : ತಾಲೂಕಿನ ಹೊಸದಿಗ್ಗೇವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯು ಮೂರು ದಿನಗಳ ವರೆಗೆ ವಿಜೃಂಭಣೆಯಿಂದ ಜರುಗಿತು.  

ಬುಧವಾರ ಜಾತ್ರೆ ನಿಮಿತ್ಯ ಜರುಗಿದ ವಿವಿಧ ಶರ್ಯತ್ತುಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎತ್ತಿನ ಗಾಡಿ ಶರ್ಯತ್ತು: ನರವಾಡದ ಸಚೀನ ಕಟ್ಟಿಕರ ಪ್ರಥಮ, ಮಾಣಕಾಪೂರದ ಸಂದೀಪ ಪವಾರ ದ್ವಿತೀಯ, ರಾಯಬಾಗದ ಮೋಸಿನ ಮುಲ್ಲಾ ತೃತೀಯ ಬಹುಮಾನ ಪಡೆದರು. ಕುದುರೆ ಗಾಡಿ ಶರ್ಯತ್ತು: ಸೌಂದತ್ತಿಯ ಚೇತನ ಕಾಟೆ ಪ್ರಥಮ, ದಿಗ್ಗೇವಾಡಿಯ ರಾಕೇಶ ಬೆನಾಡೆ ದ್ವಿತೀಯ, ಉಮ್ರಾಣಿಯ ಸಿದ್ದು ಉಮರಾಣಿ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತು: ಚಿಂಚಲಿಯ ಸುರೇಶ ಪ್ರಥಮ, ವಿನಯ ದ್ವಿತೀಯ, ನಂದಿಕುರಳಿಯ ಮಾಳಪ್ಪ ತೃತೀಯ ಬಹುಮಾನ ಪಡೆದರು. ಸಾಯಕಲ್ ಶರ್ಯತ್ತು: ಪಾಮಲದಿನ್ನಿಯ ಅಪ್ಪು ಮಾಳ್ಯಾಗೋಳ ಪ್ರಥಮ, ಧರ್ಮಟ್ಟಿಯ ಬಸು ಧರ್ಮಟ್ಟಿ ದ್ವಿತೀಯ, ಇಚಲಕರಂಜಿಯ ಬಾಳು ಹಿರೇಮಠ ತೃತೀಯ ಬಹುಮಾನ ಪಡೆದರು. ಓಡುವ ಶರ್ಯತ್ತು: ಬಡಚಿಯ ಹನಮಂತ ನಾಯಿಕ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ, ಅಲಖನೂರದ ಪರಸಪ್ಪ ಹಸರೆ ತೃತೀಯ ಬಹುಮಾನ ಪಡೆದರು.  

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜಾತ್ರೆ ಕಮೀಟಿ ಸದಸ್ಯರು ಭಾಗವಹಿಸಿದ್ದರು.