ಸಾರ್ವಜನಿಕರು ಸಹಾಯವಾಣಿ ಸದುಪಯೋಗ ಪಡೆದುಕೊಳ್ಳಿ: ಡಿಸಿ ನಕುಲ್

ಬಳ್ಳಾರಿ, ಏ.8: ಕರೋನಾ ವೈರಸ್ ನಿಯಂತ್ರಣಕ್ಕೆ ಬಳ್ಳಾರಿ ಜಿಲ್ಲಾಡಳಿತ ಸಿದ್ಧವಾಗಿದ್ದು, ಸಾರ್ವಜನಿಕರು ಜಿಲ್ಲಾಡಳಿತ ಆರಂಭಿಸಿರುವ ಸಹಾಯವಾಣಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮನವಿ ಮಾಡಿದ್ದಾರೆ.

   ಕರೋನಾ ವೈರಸ್ ಕುರಿತಂತೆ ತಮ್ಮ ಕುಂದು ಕೊರತೆಗಳ ನಿವಾರಣೆಗಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಆರಂಭಿಸಿರುವ ಸಹಾಯವಾಣಿ ದೂ: 08392-277100 ಹಾಗೂ ಮೊ:8277888866 ಸಂಪಕರ್ಿಸಿ ಸಹಾಯ ಪಡೆದುಕೊಳ್ಳಿ ಎಂದು ಅವರು ತಿಳಿಸಿದ್ದಾರೆ.

         ತಮ್ಮ ಸೇವೆಗಾಗಿ ಸಹಾಯವಾಣಿ ಕೇಂದ್ರವು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ತಮ್ಮ ದೈನಂದಿನ ಜೀವನದ ಅಗತ್ಯ ನಿರ್ವಹಣೆಯ ವಸ್ತುಗಳ ಖರೀದಿಗಾಗಿ ಪ್ರತಿ ದಿನ ಬೆಳಗ್ಗೆ ನಿಗದಿಪಡಿಸಲಾಗಿರುವ ಸಮಯದಲ್ಲಿ ನಿಗದಿಪಡಿಸಿದ ಆಯಾ ಸ್ಥಳಗಳಲ್ಲಿ ತಾವು ಅಗತ್ಯ ವಸ್ತುಗಳಾದ ಆಹಾರ ಮತ್ತು ಔಷಧಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ. ಇದಕ್ಕಾಗಿ ತಮ್ಮ ಕುಟುಂಬದಿಂದ ಒಬ್ಬರು ಮಾತ್ರ ಮಾಸ್ಕ್ ಅಥವಾ ಕರವಸ್ತ್ರ ಧರಿಸಿಕೊಂಡು, ಒಬ್ಬರಿಂದ ಒಬ್ಬರ ನಡುವೆ ಕನಿಷ್ಟ 01 ಮೀಟರ್ನ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮಾಗ್ರಿಗಳನ್ನು ಖರೀದಿಸಬಹುದು. ಹಾಗೂ ಉಳಿದ ಸಮಯದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿಯೇ ಇರಿ. ಅನಗತ್ಯವಾಗಿ ಯಾರು ಮನೆಯ ಹೊರಗಡೆ ಓಡಾಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಹೋಮ್ ಕ್ವಾರಂಟೈನ್ನಲ್ಲಿರುವವರು ಕಡ್ಡಾಯವಾಗಿ ಮನೆಯ ಒಳಗಡೆ ಇರಿ, ತಮಗೆ ಯಾವುದಾದರೂ ಕುಂದು ಕೊರತೆಗಳಿದ್ದಲ್ಲಿ ಕೋವಿಡ್-19 ಸಹಾಯವಾಣಿಯಿಂದ ಕರೆಬಂದಾಗ ತಿಳಿಸಿ ಅಥವಾ ತಾವೇ ಸಹಾಯವಾಣಿಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳಿಗೆ ಪರಿಹಾರ ಪಡೆಯಿರಿ ಎಂದು ಅವರು ತಿಳಿಸಿದ್ದಾರೆ.

ಸಕರ್ಾರದಿಂದ ಬರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ತಮ್ಮ ಹಾಗೂ ತಮ್ಮವರ ಆರೋಗ್ಯವನ್ನು ಸಂರಕಿಸಿಕೊಳ್ಳಿರಿ ಎಂದು ಸಲಹೆ ನೀಡಿದ ಅವರು ಕರೋನಾ ವೈರಸ್: "ಭಯ ಬೇಡ ಎಚ್ಚರವಿರಲಿ. ಮುಂಜಾಗೃತೆ ವಹಿಸಿ" ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.