ದಲಿತರ ಮೇಲೆ ದೌಜ್ರ್ಯನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಿ

ಲೋಕದರ್ಶನ ವರದಿ 

ಯರಗಟ್ಟಿ : ಮುಧೋಳ ತಾಲೂಕಿನ ಶಿರೋಳ ಗ್ರಾಮದ ದಲಿತ ಮುಖಂಡರ ಜೋಡಿ ಕೊಲೆ ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ವಸಂತಾಪೂರ ಗ್ರಾಮದ ರೇಣುಕಾ ಮಾದರ ಮೇಲೆ ಅತ್ಯಾಚಾರ ಹಿಗೇ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿರುವ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಲಿತ ಸಮಾಜದ ಮುಖಂಡ ಬಾಸ್ಕರ ಹಿರೆಮೇತ್ರಿ ಆಗ್ರಹಿಸಿದರು.

ಇಲ್ಲಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಸುಮಾರು ಹೊತ್ತು ಬೆಳಗಾವಿ-ಬಾಗಲಕೋಟ, ಗೋಕಾಕ-ನರಗುಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರನ್ನು ಉದ್ದೇಸಿಸಿ ಮಾತನಾಡುತ್ತಾ ಇಂತಹ ಕೃತ್ಯಗಳನ್ನು ಕಂಡು ಕೇಳರಿಯದಂತೆ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು  ಅಧಿಕಾರಿಗಳು ಹಿಂದೆಟು ಹಾಕುತ್ತಿರುವುದು ಬೆಸರದ ಸಂಗತಿ ಎಂದರು.

ಪ್ರತಿಭಟನೆ ಉಪತಹಶೀಲ್ದಾರ ಕಛೇರಿಯಿಂದ ಪ್ರಾರಂಭವಾಗಿ ನಂತರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕೆಲವು ಹೊತ್ತು ಪ್ರತಿಭಟನೆ ಮಾಡಿ ನಂತರ ಉಪತಹಶೀಲ್ದಾರ ಎಸ್.ಜಿ.ದೊಡಮನಿ ಮೂಲಕ ಸರಕಾರಕ್ಕೆ ಮನವಿ ಅಪರ್ಿಸಿದರು. 

ಈ ಸಂಧರ್ಭದಲ್ಲಿ ವಿಲ್ಸನ್ ಸೊಪ್ಪಡ್ಲ, ಸಂತೋಷ ಚನ್ನಮೇತ್ರಿ, ಫಕೀರಪ್ಪ ಚನ್ನಮೇತ್ರಿ, ಫಕೀರಪ್ಪ ಕಾಮೋಶಿ, ಸುಮಂತ ನೀಲಪ್ಪನವರ, ರೈತ ಸೇನೆ ಜಿಲ್ಲಾಧ್ಯಕ್ಷ ಸೋಮು ರೈನಾಪೂರ, ಕರವೇ ಮುಖಂಡ ಸುರೇಶ ಮುರಗೋಡ, ಬಸಪ್ಪ ಚನ್ನಮೇತ್ರಿ, ಚಿದಂಬರ ಕಟ್ಟಿಮನಿ, ಲಕ್ಕಪ್ಪ ಜಗದಾರ, ಪ್ರಕಾಶ ಚನ್ನಮೇತ್ರಿ, ಲಂಕೇಶ ಮೇತ್ರಿ, ಯಲ್ಲಪ್ಪ ಪಟ್ಟಪ್ಪನವರ, ಹನಮಂತ ನರೇರ, ಸುರೇಶ ಉದ್ದಪ್ಪನವರ, ಪುಂಡಲೀಕ ತಳವಾರ, ಮಂಜು ನೀಲಪ್ಪನವರ, ಹನಮಂತ ಕಳಸಪ್ಪನವರ, ಮುತ್ತೆಪ್ಪ ಹರಿಜನ, ಕರೆಪ್ಪ ಉಳ್ಳಿಗೇರಿ, ಸುನೀತಾ ಗಿರೆವ್ವಗೋಳ. ಯಕ್ಕೇರೆವ್ವ ಚನ್ನಮೇತ್ರಿ, ಪಾರವ್ವ ಚನ್ನಮೇತ್ರಿ, ಮಾದೇವಿ ಗುಡಮಕೇರಿ, ದಲಿತಪರ ವಿವಿಧ ಸಂಘಟನೆಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ ಮಹಿಳಾ ಸಂಘ ಸದಸ್ಯರು  ಉಪಸ್ಥಿತರಿದ್ದರು.