ರಾಯಬಾಗ, 07 : ಸರ್ಕಾರ ನೀಡುವ ಸಹಾಯಧನದೊಂದಿಗೆ ತಮ್ಮ ಹಣವನ್ನು ಹಾಕಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ನಿಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಾಳ ಗ್ರಾಮದ ವಸತಿ ರಹಿತರಿಗೆ ಬಸವ ವಸತಿ ಯೋಜನೆಯಡಿ (ಹೆಚ್ಚುವರಿ) ಮಂಜೂರಾದ 40 ಫಲಾನುಭವಿಗಳಿಗೆ ಮನೆ ಕಟ್ಟಡ ನಿರ್ಮಾಣ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮನೆಗಳ ನಿರ್ಮಾಣದ ಜೊತೆಗೆ ಶೌಚಾಲಯಗಳನ್ನು ಕೂಡ ನಿರ್ಮಿಸಿಕೊಳ್ಳಬೇಕು. ಬಯಲು ಶೌಚ ಮುಕ್ತ ಗ್ರಾಮ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು.
ಗ್ರಾ.ಪಂ.ಸದಸ್ಯರಾದ ಅರುಣ ಐಹೊಳೆ, ಅಪ್ಪಾಸಾಬ ಕೆಂಗನ್ನವರ, ಸಿಬ್ಬಂದಿ ಮಲ್ಲು ಕಾಂಬಳೆ, ಭೀಮು ಮುಧೋಳೆ, ಸತ್ಯಪ್ಪ ದಾವಣೆ, ನಿಲಪ್ಪ ಐಹೊಳೆ, ತಮ್ಮಾಣಿ ಗೊಂಡೆ, ಕುಮಾರ ಗುರವ, ಬಸಲಿಂಗ ಮಗದುಮ್ಮ, ಈರಗೌಡ ಪಾಟೀಲ, ಮಹೇಶ ಕರಮಡಿ, ಬಾಳು ಹಳಾಜೆ ಹಾಗೂ ಫಲಾನುಭವಿಗಳು ಇದ್ದರು.