ಮಾಸ್ಕೋ, ಸೆ 16 ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆಯ ಕುರಿತು ರಷ್ಯಾ, ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ರಷ್ಯಾದ ರೋಸ್ಟೆಕ್ ಸರ್ಕಾರಿ ನಿಗಮದ ಸಿಇಒ ಸೆಗರ್ೆ ಚೆಮೆಜೊವ್ ಪ್ರಕಟಿಸಿದ್ದಾರೆ.
ಎಸ್ -30 ಯುದ್ಧ ವಿಮಾನ ಮತ್ತು ಟಿ-90 ಫಿರಂಗಿ ಸೇರಿದಂತೆ ಹೆಚ್ಚಿನ ತಂತ್ರಜ್ಞಾನಗಳನ್ನು ಉತ್ಪಾದಿಸುವ ಪರವಾನಗಿಯನ್ನು ಭಾರತ ಈಗಾಗಲೇ ಪಡೆದುಕೊಂಡಿದೆ ಸ್ಪುಟ್ನಿಕ್ ವರದಿ ಸೋಮವಾರ ಇಲ್ಲಿ ಹೇಳಿದೆ.
'ಭಾರತದೊಂದಿಗೆ ಕೂಡಿ ಅಲ್ಲಿನ ಭೂಪ್ರದೇಶದಲ್ಲಿ ಅಲ್ಲಿಯವರೇ ವಿಜ್ಞಾನಿಗಳೊಂದಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ಚೆಮೆಜೊವ್ ಗಮನ ಸೆಳೆದಿದ್ದಾರೆ.
ಬ್ರಹ್ಮೋಸ್ ಏರೋಸ್ಪೇಸ್ನ ಜಂಟಿ ಉದ್ಯಮವಾದ ರಷ್ಯಾದ ರಾಕೆಟ್ ಮತ್ತು ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎನ್ಪಿಒ ಮಶಿನೋಸ್ಟ್ರೊಯೆನಿಯಾ ಮತ್ತು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ನಿರ್ಮಿಸಲ್ಪಟ್ಟ ಬ್ರಹ್ಮೋಸ್ ವಿಶ್ವದ ಅತಿ ವೇಗದ ಕ್ಷಿಪಣಿ ಎನಿಸಿದೆ.
ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು 18-19 ತಿಂಗಳಲ್ಲಿ ಭಾರತಕ್ಕೆ ಪೂರೈಸುವುದಾಗಿ ಈ ತಿಂಗಳ ಆರಂಭದಲ್ಲಿ ರಷ್ಯಾದ ಉಪ ಪ್ರಧಾನಿ ಯೂರಿ ಬೊರಿಸೊವ್ ಹೇಳಿದ್ದರು.