ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ರಮೇಶ ಸಾಲಂಕಿ ಅವಿರೋಧವಾಗಿ ಆಯ್ಕೆ
ತಾಳಿಕೋಟಿ 25: ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳದಲ್ಲಿ ಜರುಗಿದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿಜಯಪುರ ಜಿಲ್ಲಾ ವಿಶ್ವಸ್ಥ ಮಂಡಳಿಯ ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ತಾಳಿಕೋಟಿ ಪಟ್ಟಣದ ಓಷಧಿ ವ್ಯಾಪಾರಿ ರಮೇಶ ಸಾಲಂಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.