ಲೋಕದರ್ಶನವರದಿ
ಕಲಕೇರಿ೩೦: ಮತದಾರ ಪ್ರಭುಗಳು ಈ ನಾಡಿನ ಹಣೆಬರಹವನ್ನು ನಿರ್ಣಯಿಸುವರು. ಮತದಾರರು ಅತ್ಯಂತ ಜಾಗುರಕರಾಗಿ ಯಾವುದೇ ಆಸೆ ಆಕಾಂಕ್ಷೆಗಳಿಗೆೆ ಒಳಗಾಗದೇ , ಜಾತಿ, ಮತ, ಪಂಗಡಗಳನ್ನು ಎಣಿಸದೇ ಸರಿಯಾದ ಅಭ್ಯಥರ್ಿಗೆ ನಿಮ್ಮ ಮತ ಚಲಾಯಿಸಬೇಕು ಆಗ ಮಾತ್ರ ಸದೃಡ ಸಮಾಜದ ನಿಮರ್ಾಣವಾಗಿ ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಕಲಕೇರಿಯ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ, ತಾ.ಪಂ, ಜಿ.ಪಂ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಹಯೋಗದದೊಂದಿಗೆ ವಿಜಯಪೂರ ಜಿಲ್ಲಾಡಳಿತದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ದೇವರ ಹಿಪ್ಪರಗಿ ತಾಲೂಕಿನ ದಂಡಾಧಿಕಾರಿಗಳಾದ ರಮೇಶ ಅಳವಂಡಿಕರ ಮಾತನಾಡಿದರು.
ಇ.ವಿ.ಎಂ ಮಶೀನ, ಹಾಗೂ ವಿ.ವಿ.ಪ್ಯಾಡಗಳ ಬಗ್ಗೆ ಈಗಾಗಲೇ ನಮ್ಮ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ . ಅದೇ ರೀತಿ ಈ ಸಲ ಚುನಾವಣಾ ಅಭ್ಯಥರ್ಿಗಳ ಭಾವ ಚಿತ್ರವನ್ನು ವಿ.ವಿ.ಪ್ಯಾಡನಲ್ಲಿ ತೋರಿಸಲಾಗುತ್ತೆ, ಹಾಗೆ ಮತ ಚಲಾಯಿಸಿದ 7 ಸೆಕೆಂಡಗಳಲ್ಲಿ ಅದನ್ನು ಮತದಾರರು ದೃಡಿಕರಿಸಿಕೊಳ್ಳಬಹುದು.
ಕೆಲವೊಂದು ವೇಳೆ ಯಾರಾದರೂ ಮತ ಚಲಾಯಿಸಲು ಅಡ್ಡಿ ಪಡಿಸಿದರೆ ಅದಕ್ಕೆ ಯಾರು ಅಂಜುವ ಅವಶ್ಯಕತೆ ಇಲ್ಲ ನಾವು ಈಗ 21 ನೇ ಶತಮಾನದಲ್ಲಿದೇವೆ. ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಎಲ್ಲ ನಾಗರಿಕರ ಆದ್ಯ ಕರ್ತವ್ಯವಾಗಿದೆ.
ಈ ಸಲ ಎಲ್ಲ ಮತದಾರರೂ ಎನೇ ಕೆಲಸಗಳು ಇದ್ದರು ಸಹ ಅದನ್ನು ಬದಿಗೊತ್ತಿ ಮೊದಲು ಮತ ಚಲಾಯಿಸಿ . ಇದಕ್ಕಾಗಿ ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ, ಒಟ್ಟಾರೆಯಾಗಿ ಈ ಸಲ 100% ಮತ ಚಲಾವಣೆ ಆಗುವುದು ನಮ್ಮೆಲರ ಕರ್ತವ್ಯ ಆಗಿದೆ ಎಂದು ರಮೇಶ ಅಳವಂಡಿಕರ ಮಾತನಾಡಿದರು.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ಇರುವ ಸಕರ್ಾರದ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದಾಗಿದೆ. ಜಗತ್ತಿನಲ್ಲಿ ನಮ್ಮ ಪ್ರಜಾಪ್ರಭುತ್ವವು ಅಗ್ರಗಣ್ಯವಾಗಿದೆ. ಆದ್ದರಿಂದ ಚುನಾವಣೆಯನ್ನುವದು ಮುಕ್ತವಾಗಿ, ಪಾರದರ್ಶಕವಾಗಿ, ನಿಭರ್ಿತವಾಗಿ ನಡೆಯಬೇಕು, ಎಂದು ಚುನಾವಣಾ ಅಧಿಕಾರಿಗಳಾದ ಕೆ.ಹೆಚ್.ನಾಗಹಣಮಯ್ಯ ಮಾತನಾಡಿದರು.
ಹಿಂದಿನ ಕಾಲದಲ್ಲಿ ರಾಜರು ರಾಣಿಯರ ಹೊಟ್ಟೆಯಲ್ಲಿ ಹುಟ್ಟುತ್ತಿದ್ದರು, ಆದರೆ ಇಂದಿನ ಪರಿಸ್ಥಿತಿ ರಾಜರು ಹುಟ್ಟುವುದು ಮತಪೆಟ್ಟಿಗೆಯಲ್ಲಿ ಹುಟ್ಟುತ್ತಾರೆ. ಆದ್ದರಿಂದ ಸಾರ್ವಜನಿಕರು ಕ್ಷೇಮವಾಗಿರಬೇಕಾದರೆ ಸರಿಯಾದ ರಾಜನನ್ನು ಆರಿಸಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಹಾಗೆ ಮತ ಚಲಾಯಿಸುವಾಗ ಯಾವುದಾದರೂ ತೊಂದರೆಗಳಾದರೆ ನಾವೂ ನಿಮ್ಮ ಸೇವೆಗೆ 24*7 ಸದ್ದಾ ಸಿದ್ದರಿದ್ದೇವೆ ಎಂದು ಕಲಕೇರಿಯ ಪಿ.ಎಸ್.ಆಯ್ ಎನ್.ಆರ್ ಖಿಲಾರೆ ಮಾತನಾಡಿದರು.
ಗ್ರಾಮಲೆಕ್ಕಾಧಿಕಾರಿಗಳಾದ ಎಸ್.ಕೆ.ಬಿಳಿಕುದುರೆ. ಕಂದಾಯ ನಿರಿಕ್ಷಕರು. ಆರ್.ಆಯ್ ಪಮಾರ, ಈರಣ್ಣ ಕಡಕೋಳ, ಪರಶುರಾಮ ದೊರೆಗೋಳ,ವಿ.ಆರ್.ಝಳಕಿ. ಲಕ್ಕಪ್ಪ ಬಡಿಗೇರ, ಅಪ್ಪಾಸಾಹೇಬ ದೇಸಾಯಿ,ಎಂ.ಜಿ.ಗುಮಶೆಟ್ಟಿ. ಶಾಂತಗೌಡ ಪಾಟೀಲ, ಶರಣಯ್ಯ ಮಠಮತಿ, ಆಯ್.ಎಂ.ಸಗರ, ಈರಘಂಟಿ ಮೋಪಗಾಋ, ಪ್ರಕಾಶ ಯರನಾಳ, ಬಸಲಿಂಗಪ್ಪ ಪೂಜಾರಿ, ಲಾಲಬಾವ ವಲ್ಲಭಾಯಿ, ಬಂದೇನಮಾಜ ನಾಯ್ಕೋಡಿ, ಬಂದಗಿಸಾಬ ಬಿಜಾಪುರ, ದವಲು ನಾಯ್ಕೋಡಿ ಹಾಗೂ ಶಿಕ್ಷಕರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಘೊಂಡಿದ್ದರು.