ಲೋಕದರ್ಶನ ವರದಿ
ಬೆಳಗಾವಿ 22: ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಒಂದು ವರ್ಷದ ಅವಧಿಯಲ್ಲಿ 1 ಕೋಟಿ ರೂ. ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ವಿವೇಕಾರವ್ ಪಾಟೀಲ
ಹೇಳಿದರು.
ಹಾಲು ಒಕ್ಕೂಟದವತಿಯಿಂದ 90 ದಿನಗಳವರೆಗೆ ಕೆಡದಿರುವ ಯು.ಎಚ್.ಟಿ ಎಮ್ಮೆ ಹಾಲಿನ ಉತ್ಪನ್ನ ಬಿಡುಗಡೆ ನಿಮಿತ್ತ ಶನಿವಾರ ನಡೆದ ಪತ್ರಿಕಾಗೋಷಿಯಲ್ಲಿ ಅವರು ಮಾತನಾಡಿದರು.
ಈ ನೂತನ ಹಾಲಿನ ಉತ್ಪನ್ನ ನಂದಿನಿ ಡೇರಿಯಲ್ಲಿ ತಯಾರಿಸಲಾಗುತ್ತದೆ. ಶೇ 6.0 ಜಿಡ್ಡು ಮತ್ತು 9.0 ಜಿಡ್ಡೇತರ ಘನ ಪದಾರ್ಥ ಹೊಂದಿದ ಂ 2 ಗುಣಮಟ್ಟದ ಎಮ್ಮೆ ಹಾಲು ಇದಾಗಿದೆ. ಹೈನುಗಾರಿಕೆಯ ತಂತ್ರಜ್ಞಾನದ ಬೆಳವಣಿಗೆ ಹಾಗೂ ಅವಿಷ್ಕಾರಗಳ ಫಲವಾಗಿ ಹಾಲನ್ನೂ ಸ್ನಾಚೆಯಲ್ಲಿ ತುಂಬಿ ವಾತಾವರಣದ ತಾಪಮಾನದಲ್ಲಿ 3 ತಿಂಗಳು ಈ ಹಾಲನ್ನು ದೀರ್ಘ ಅವಧಿ ಬಾಳಿಕೆಗಾಗಿ ಯು ಎಚ್ ಟಿ ಸಂಸ್ಕರಣೆ ಅನು ಸರಿಸಲಾಗಿದೆ. ಎಂದು ಅವರು ವಿವರಿಸಿದರು.
ಒಕ್ಕೂಟದ ಹಾಲನ್ನು ಹೊರತು ಪಡಿಸಿ ಇತರ ಕಂಪನಿ ಹಾಲು ಗುಣಪಟ್ಟದ್ದಾಗಿರುವದಿಲ್ಲ. ಎಷ್ಟೋ ಕಡೆ ಹಾಲಿನಲ್ಲಿ ಕಲಬೆರಕೆ ಮಾಡಲಾಗುತ್ತದೆ. ಅವರು ಮಾರಟಗಾರರಿಗೆ ಹೆಚ್ಚಿನ ಲಾಭ ಕೊಡಬಹುದು ಆದರೆ ಹಾಲು ಮಾತ್ರ ಗುಣಾತ್ಮಕ ರೀತಿಯಲ್ಲಿ ಇರುವದಿಲ್ಲ. ಆದರೆ ಒಕ್ಕೂಟದ ಹಾಲು ಶ್ರೇಷ್ಠ ಗುಣಾತ್ಮಕತೆ ಹೊಂದಿರುತ್ತದೆ. ನಿಗದಿ ಪಡಿಸಿದ ರೀತಿಯಲ್ಲೇ ರೈತರಿಗೆ ಮಾರಾಟಗಾರರಿಗೆ ಲಾಭಾಂಶ ನೀಡಲಾಗುತ್ತದೆ ಎಂದರು.
ಒಕ್ಕೂಟದ ನಿದರ್ೇಶಕ ಸೋಮಲಿಂಗ ಮುಗಳಿ ಮಾತನಾಡಿ ದೇಶದೆಲ್ಲೆಡೆ ಒಕ್ಕೂಟದ ಉತ್ಪನ್ನಗಳು ಖ್ಯಾತಿ ಪಡೆದಿದೆ. ಸೈನಿಕರಿಗೂ ಸಹ ಹಾಲು ಪೂರೈಸಲಾಗುತ್ತದೆ. ನೂತನವಾಗಿ ಬಿಡುಗಡೆಗೋಳ್ಳುತ್ತಿರುವ ಎಮ್ಮೆ ಹಾಲಿನ ಪ್ಯಾಕೇಟ್ಗಳು. ಕಿರಾಣಿ, ಪಾನ್ ಅಂಗಡಿಗಳಲ್ಲೂ ದೊರೆಯುತ್ತದೆ. ರೈತರಿಗೆ ಅನುಕೂಲತೆ ದೃಷಿಯಿಂದ ಎಲ್ಲಾ ರೀತಿಯ ಸೌಲಭ್ಯ ನೀಡಲಾಘುತ್ತದೆ. ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿದರ್ೇಶಕ ಉಬೇದುಲ್ಲಾ ಖಾನ, ನಿದರ್ೇಶಕರಾದ ಸಂಜಯ ಗೌಡ ಪಾಟೀಲ, ಬಾಬು ಗಲಗಲಿ, ಸುರೇಶ ಪಾಟೀಲ, ಕಲ್ಲಪ್ಪ ಗಿರಣ್ಣವರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.