ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ರಾಯಬಾಗ,3 : ಸರಕಾರ ರೈತರ ಸಾಲ ಮನ್ನಾ ಮಾಡಲು ಕೇಳಿದ ದಾಖಲಾತಿಗಳನ್ನು ತೆಗೆದುಕೊಂಡು ಬ್ಯಾಂಕಿನ ಮುಂದೆ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತರೂ ಪ್ರಯೋಜನವಾಗದೇ ರೈತರ ಹಣ ಹಾಗೂ ಸಮಯ ವ್ಯಯವಾಗುತ್ತಿದ್ದು, ಇದೇ ರೀತಿ ಮುಂದುವರೆದರೆ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೂನಪ್ಪ ಪೂಜೇರಿ ಹೇಳಿದರು. 

ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ತಹಶೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 

     ಬ್ಯಾಂಕಿನವರು ಒಂದು ದಿನಕ್ಕೆ ಕೇವಲ 30-40 ರವರೆಗೆ ಅಜರ್ಿಗಳನ್ನು ಮಾತ್ರ ಸ್ವೀಕರಸುತ್ತಿದ್ದಾರೆ. ಒಂದು ಬ್ಯಾಂಕಿನಲ್ಲಿ ಕನಿಷ್ಟ 2000 ಕ್ಕಿಂತ ಹೆಚ್ಚು ರೈತರು ಸಾಲಗಾರರಿದ್ದು, ಸರಕಾರದ ಗಡುವಿನಲ್ಲಿ ಅಜರ್ಿ ಸಲ್ಲಿಸುವುದು ಮುಗಿಯುವದಿಲ್ಲ. ಕಾರಣ ರೈತರು ಗಾಬರಿಗೊಂಡು ರಾತ್ರಿ ಹೊತ್ತಿನಲ್ಲಿ ಬ್ಯಾಂಕಿನವರು ಕೊಡುವ ಟೋಕನ್ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿಮರ್ಾಣವಾಗಿದೆ. ಸಾಲ ಪಡೆಯುವಾಗ ಲಗತ್ತಿಸಬೇಕಾದ ಎಲ್ಲ ದಾಖಲಾತಿಗಳನ್ನು ಲಗತ್ತಿಸಿದ ನಂತರವೇ ಸಾಲ ಮುಂಜೂರ ಮಾಡಿರುತ್ತಾರೆ. ಆದರೂ ಪುನಃ ಬ್ಯಾಂಕಿನ ಮುಂದೆ ಕೆಲಸ ಕಾರ್ಯಗಳನ್ನು ಬಿಟ್ಟು ದಿನಗಟ್ಟಲೇ ಕಾಯುವದು ಹಿಂಸೆಯಾಗುತ್ತಿದೆ. ಸರಕಾರ ಈ ರೀತಿಯಾಗಿ ರೈತರಿಗಾಗುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದರು.

     ರೈತರು ಬಹು ದಿನಗಳಿಂದ ಅಧಿಕಾರಿಗಳ ಸಭೆ ನಡೆಸಲು ಮನವಿ ಮಾಡಿದರೂ ಕೂಡಾ ಇಲ್ಲಿಯವರೆಗೆ ಅಧಿಕಾರಿಗಳ ಸಭೆ ಕರೆದಿರುವದಿಲ್ಲ. ರೈತರಿಗಾಗಿ ಸರಕಾರದಿಂದ ಬರುವ ಅನುದಾನದ ಸಂಪೂರ್ಣ ಮಾಹಿತಿ ರೈತರಿಗೆ ತಿಳಿಯಬೇಕಾದರೆ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಬೇಕೆಂದು ಒತ್ತಾಯಿಸಿದರು.

    ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಜಯಶ್ರೀ ಗುರನ್ನವರ, ತಾಲೂಕಾ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಕಾರ್ಯದಶರ್ಿ ಕಾಶಿರಾಯ್ ಕಲ್ಯಾಣಿ, ರಮೇಶ ಕಲ್ಹಾರ, ಗುರುನಾಥ ಹೆಗಡೆ, ತುಕಾರಾಮ ಕುರಣೆ, ಅಶೋಕ ಗಸ್ತಿ, ಗುರುನಾಥ ಹುಕ್ಕೇರಿ, ನಾಗಪ್ಪ ಅಂದಾನಿ, ಸಿದ್ದಣ್ಣ ಬ್ಯಾಗಿ, ಪ್ರಕಾಶ ಪಾಟೀಲ, ಶಿವಾಜಿ ಪಾಟೀಲ ಸೇರಿದಂತೆ ಅನೇಕ ರೈತರು ಇದ್ದರು.