ಸಂಶೋಧನೆಯು ಯಗಧರ್ಮದ ಸಂವೇದನೆಯ ಪ್ರತಿಬಿಂಬವಾಗಿದೆ: ಪ್ರೊ. ಉಷಾ

ಲೋಕದರ್ಶನ ವರದಿ

ಬೆಳಗಾವಿ, 31: ಸಾಹಿತ್ಯ ಸಂಶೋಧನೆಯು ಯುಗಧರ್ಮದ ಸಂವೇದನೆಯ ಪ್ರತಿಬಿಂಬವಾಗಿದೆ. ಪ್ರಾಚೀನ ತನಗಳ ಶೋಧದಲ್ಲಿಯೂ ಸಮಕಾಲೀನ ಸಮಾಜದ ಸಂವೇದನೆಗಳ ಹುಡುಕಾಟವೇ ಅಲ್ಲಿ ಪ್ರಮುಖವಾಗಿ ನಡೆಯುತ್ತಿರುತ್ತದೆ.  ವಾಸ್ತವವಾಗಿ ಸಂಶೋಧನೆಯೆನ್ನುವುದು ನಮ್ಮ ಅಗತ್ಯದ ಹೊಸತೊಂದರ ಅನ್ವೇಷಣೆಯಾಗಿದೆ. ಸಾಹಿತ್ಯ ಸಂಶೋಧನೆಯಲ್ಲಿ ತೊಡಗುವುದಕ್ಕಿಂತ ಮುಂಚೆ ವಿಭಿನ್ನ ಭಾಷಾ ವ್ಯವಸ್ಥೆಗಳ ಸಾಮಾಜಿಕ ಒಪ್ಪಂದಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಸಂಸ್ಕೃತ ಭಾಷೆ ಪ್ರಾಬಲ್ಯವಿರುವ ಸಂದರ್ಭದಿಂದ ಇಂದಿನವರೆಗೂ ಸಾಮಾಜಿಕ ಮೌಲ್ಯಗಳ ಶೋಧ ಮತ್ತು ಅದರ ರೂಪಪರಿವರ್ತನೆಗಳನ್ನು ಸಂಶೋಧನೆಯೆಂಬ ಪ್ರಕ್ರಿಯೆಯಿಂದ ಗುರುತಿಸುತ್ತೇವೆ. ಈ ಅಂಶವನ್ನು ಭಾಷೆ ಮತ್ತು ಸಾಹಿತ್ಯ ಸಂಶೋಧನಾ ಸಂದರ್ಭಗಳಲ್ಲಿ ವಿಭಿನ್ನ ಹಂತಗಳಲ್ಲಿ ಕಾಣುತ್ತೇವೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಉಷಾ ಆರಾಧ್ಯ ಅಭಿಪ್ರಾಯಪಟ್ಟರು. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಸಂಶೋಧನಾ ವಿದ್ಯಾಥರ್ಿಗಳಿಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಿಳಿಸಿದರು.  ಯುಗಧರ್ಮದ ಸಂವೇದನಾಶೀಲ ಮೌಲ್ಯಗಳು ಸಂಶೋಧನೆಯಲ್ಲಿ ಫಲಿತಗಳಾಗಿ ಹೊರಹೊಮ್ಮಿರುವ ಕಥನಗಳು ನಮಗಿಂದು ಹೆಚ್ಚು ಪ್ರಸ್ತುತವಾಗಿವೆಯೆಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಮುಖ್ಯಸ್ಥರಾದ ಪ್ರೊ. ಎಸ್.ಎಂ. ಗಂಗಾಧರಯ್ಯ ಮಾತನಾಡಿ,  ಕಳೆದ ಶತಮಾನದ ತೊಭತ್ತರ ದಶಕದಿಂದ ಸಂಶೋಧನಾ ಮಾದರಿಯಲ್ಲಿ ವ್ಯಾಪಕವಾಗಿ ಬದಲಾಗಿದೆ. ಆಗ ಆರಂಭವಾದ ಸಂಸ್ಕೃತಿ ಅಧ್ಯಯನಗಳಿಂದಾಗಿ ಸಂಶೋಧನೆಯಲ್ಲಿ ವಸ್ತುನಿಷ್ಠತೆ ಕಾಣುತ್ತಿದೆ. 

ಅಂತರ್ಶಿಸ್ತೀಯ, ಅಲಕ್ಷಿತ ಸಮುದಾಯಗಳ ಅಧ್ಯಯನ ಮಾದರಿಗಳು, ಚಾರಿತ್ರಿಕ ಹಾಗೂ ಸಾಸ್ಕೃತಿಕ ಕಥನಗಳನ್ನು ಪುನಾರೂಪಿಸುವ ಮಾದರಿಗಳು ಅಂದಿನಿಂದ ಮುನ್ನೆಲೆಗೆ ಬಂದಿವೆ. ಆದರೆ ಈ ಬದಲಾವಣೆ ಔಚಿತ್ಯಪೂರ್ಣವಾಗಿತ್ತಾದರೂ ಇಂದು ಅದು ತನ್ನ ಮೂಲೋದ್ಧೇಶವನ್ನು 

ಕಳೆದುಕೊಳ್ಳುತ್ತಿದೆ. 

ವಾಸ್ತವವಾಗಿ ನಿದರ್ಿಷ್ಟ ಗೊತ್ತುಗುರಿಗಳಿಲ್ಲದ ಇಂದಿನ ಶೋಧಗಳು ಸಂಶೋಧನಾ ಕ್ಷೇತ್ರವನ್ನು ಯಾವ ನೆಲೆಗೆ ಕೊಂಡೊಯ್ಯುತ್ತವೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ಸಾಹಿತ್ಯ ಮತ್ತು ಭಾಷಾ ಸಂಶೋಧನೆಗಳಿಗೆ ಕೆಲವು ನಿದರ್ೇಶಿಕೆಗಳನ್ನು ರೂಪಿಸಬೇಕಾದ ಅನಿವಾರ್ಯತೆಯಿದೆಯೆಂದು ಅಭಿಪ್ರಾಯಪಟ್ಟರು.

ಸಂಶೋಧನಾ ಮಾರ್ಗದರ್ಶಕರಾದ ಡಾ. ಗಜಾನನ ನಾಯ್ಕ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಿಸಿದರು. ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾಥರ್ಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.