ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲ ಗಂಟು ಮೂಟೆ ಕಟ್ಟಿ: ಸಿ ಎಸ್ ನಾಡಗೌಡ

Respond to people's problems, not just tie them up: CS Nadagowda

ಲೋಕದರ್ಶನ ವರದಿ 

ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲ ಗಂಟು ಮೂಟೆ ಕಟ್ಟಿ: ಸಿ ಎಸ್ ನಾಡಗೌಡ 

ಮುದ್ದೇಬಿಹಾಳ 02: ಮತಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿ ಸರಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ತಾಲೂಕಿನ  ಎಲ್ಲ ಸರಕಾರಿ ಅಧಿಕಾರಿಗಳು ಮುಂದಾಗಬೇಕು ಜನರ ಸೇವೆ ಮಾಡಲು ಇಚ್ಚೆ ಇಲ್ಲದವರು ಗಂಟು ಮೂಟೆ ಕಟ್ಟಿಕೊಂಡು ಹೋಗಿ ನನಗೆ ನನ್ನ ಮತಕ್ಷೇತ್ರ ಎಲ್ಲ ಜನರಿಗೆ ಒಳ್ಳೆಯದನ್ನು ಬಯಸುವವನು ಎಂದು ಸಮಗ್ರ ಅಭಿವೃದ್ಧಿಯ ಕನಸು ಕಟ್ಟಿಕೊಂಡವನು ಸರಕಾರದ ಯೋಜನೆಗಳನ್ನು ಸಮರ​‍್ಕ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಾದರಿಯ ಮತಕ್ಷೇತ್ರ ನಿರ್ಮಿಸಲು ಸಹಕಾರ ನೀಡಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕುಂಟೋಜಿ ಹಾಗೂ ಅಬ್ಬಿಹಾಳ ಗ್ರಾಮದಲ್ಲಿ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಆದರೇ ವಿರೋಧ ಪಕ್ಷದವರು ಗ್ಯಾಂರಟಿ ಯೋಜನೆಯಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕೆ ಮಾಡುತ್ತಿವೆ. ಈ ಹಿಂದಿನ ಸರಕಾರ ಹಣಕಾಸು ಇಲಾಖೆಯ ಯಾವೂದೇ ಒಪ್ಪಿಗೆ ಹಾಗೂ ಸರಕಾರ ಯಾವೂದೇ ಪರವಾನಿಗೆ ಇಲ್ಲದೇ ಅವೈಜ್ಞಾನಿಕವಾಗಿ ಸುಮಾರು 2.5 ಲಕ್ಷ ಕೋಟಿಗಳಷ್ಟು ಹಣವನ್ನು ಕಾಮಗಾರಿಗಳಿಗೆ ಬಿಲ್ ಪಾವತಿಸದೆ ಬಾಕಿ ಉಳಿಸಿ ಹೊಗಿದ್ದರಿಂದ ಹಿಂದಿನ ಸರಕಾರ ಮಾಡಿರುವ ಸಾಲವನ್ನು ಇಂದು ನಮ್ಮ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ತೀರಿಸುವ ಕಾಲ ಬಂದೋದಗಿದೆ. ಈ ಬಾರಿ 4 ಲಕ್ಷಕ್ಕೂ ಅಧಿಕ ಹಣದ ಬಜೇಟ್ ಮಂಡಿಸಿದೆ ಇನ್ನುಮುಂದೆ ಹಂತ ಹಂತವಾಗಿ ರಸ್ತೆ ಚರಂಡಿ ನೀರಾವರಿ, ಶೈಕ್ಷಣಿಕ ಸುದಾರಣೆ, ಕುಡಿಯುವ ನೀರು, ರೈತರಿಗೆ ಬೀಜ ಗೊಬ್ಬರ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಣ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. 

ಕುಂಟೋಜಿ ಗ್ರಾಮಸ್ಥರು ಹಳವು ವರ್ಷಗಳಿಂದ ಕುಂಟೋಜಿ ಸೀಮೇಯಲ್ಲಿ ಕೃಷ್ಣಾ ನದಿಯ ಚಿಮ್ಮಲಗಿ ಏತನೀರಾವರಿಯ ಕಾಲುವೆ ನಿರ್ಮಾಣಗೊಂಡಿದೆಯಾದರೂ ಕಾಲುವೆಗೆ ನೀರು ಹರಿಸಿಲ್ಲ ಕಾಲುವೆಗೆ ನೀರು ಹರಿಸುವ ಮೂಲಕ ನಮ್ಮ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಡಗೌಡರಿಗೆ ಮನವಿ ಮಾಡಿಕೊಂಡರು ತಕ್ಷಣದಲ್ಲಿಯೇ ಮನವಿಗೆ ಸ್ಪಂದಿಸಿದ ಶಾಸಕ ಸಿ ಎಸ್ ನಾಡಗೌಡರು ಕೇಂದ್ರ ಸರಕಾರ ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು ಜೊತೆಗೆ ಕೆಬಿಜೆ ಎನ್ ಎನ್ ಎಲ್ ನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕೆಂದು ಹೋರಾಟ ನಡೆಸಿದರು ನಮ್ಮ ರೈತ ಹೋರಾಟಗಾರರ ಸ್ಪಂದಿಸಲಿಲ್ಲ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಿಲ್ಲ. ಹೀಗಾಗಲೇ ಕೆಲ ತೊಡಕುಗಳಿಗೆ ಕಾರಣವಾಗಿದೆ.  

ಸಧ್ಯ ರೈತರ ಆಶೆಯದಂತೆ ತಾತ್ಕಾಲಿಕವಾಗಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವ ಉದ್ದೇಶದಿಂದ ಕಾಲುವೆಗಳಿಗೆ ನೀರು ಹರಿ ಬಿಡಲಾಗುವುದು ಜೊತೆಗೆ ಸಧ್ಯ ಬೇಸಿಗೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಕೆರೆ ತುಂಬಿಸಲು ಕಾಲುವೆಗಳಿಗೆ ಈ ವರ್ಷದ ಕೊನೆ ಎಸಿಸಿ ಸಭೆ ನಡೆಸಲಾಗುವುದು ಈ ವೇಳೆ ಎಲ್ಲ ಕಾಲುವೆಗಳಿಗೆ ನೀರು ಹರಿಬಿಡಲು ಚರ್ಚಿಸಲಾಗುವುದು ಎಂದರು. 

 ಮುಖ್ಯಮಂತ್ರಿ ಸಿದ್ರಾಮಯ್ಯನವರ ವಿಶೇಷ ನಿಧಿಯಲ್ಲಿ ಸುಮಾರು 1ಕೋಟಿ 20 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿಕೊಂಡು ತರುವ ಮೂಲಕ ತಾಲೂಕಿನ ಅಬ್ಬಿಹಾಳ ಗ್ರಾಮದಲ್ಲಿ ಸರಕಾರಿ ಶಾಲೆಗೆ ಹೆಚ್ಚುವರಿ ಕೋಠಡಿಗಳನ್ನು ನಿರ್ಮಿಸಲಾಗುವುದು ಜತೆಗೆ ಶಾಲಾ ಮಕ್ಕಳಿಗೆ ಆಟದ ಮೈದಾನ ನಿರ್ಮಸಲಾಗುವುದು ಆದರೇ ಖಾಸಗಿಯವರುಯಾರಾದರೂ ಜಮೀನು ನೀಡಲು ಮುಂದಾಗಬೇಕು ಎಂದರು. 

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂನು ಬಾಹಿರವಾಗಿ ಉತಾರಗಳನ್ನು ನೀಡದಂತೆ ಜತೆಗೆ ಈಗಾಗಲೇ ಗ್ರಾಮಸಭೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವಸತಿ ರಹಿತ ನಿರಾಶ್ರಿತ ಕುಟುಂಬಗಳಿಗೆ ನೀಡುವಂತೆ ನೋಡಿಕೊಳ್ಳಬೇಕು ಯಾವೂದೇ ಸರಕಾರದ ರಸ್ತೆಯಾಗಿರಲಿ, ಸೇತುವೆಗಳಾಗಲಿ  ಕಟ್ಟಡಗಳಾಗಲಿ ಗುತ್ತಿಗೆದಾರರು ಕಳಪೆ ಮಟ್ಟದಲ್ಲಿ ನಿರ್ವಹಿಸದೇ ಗುಣಮಟ್ಟ ಕಾಮಗಾರಿ ನಿರ್ವಹಿಸುವಂತೆ  ಜೊತೆಗೆ ಆಯಾ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿನಿಂಗಪ್ಪ ಮಸಳಿ ಹಾಗೂ ವಿವಿಧ ಸರಕಾರಿ ಇಲಾಖೆಯ  ಸಂಬಂಧ ಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.