ತಾಳಿಕೋಟಿ 08: ತಾಲೂಕಿನ ಮಿಣಜಗಿ ಕ್ರಾಸ್‌ದಲ್ಲಿರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಘನಮಠೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100ಕ್ಕೆ ಶೇ 92.83 ಫಲಿತಾಂಶ ಬಂದಿದ್ದು, ಪ್ರಥಮ ಸ್ಥಾನ ಐಶ್ವರ್ಯ ಸಜ್ಜನ 599/625(ಶೇ.95.84) ಮತ್ತು ಪ್ರಭುಲಿಂಗ ಚೌದ್ರಿ 599/625((ಶೇ.95.84) ದ್ವಿತೀಯ ಸ್ಥಾನ, ಭಾಗ್ಯಶ್ರೀ ಮುಡ್ಡಿ 587/625((ಶೇ.93.92) ಮತ್ತು ಪ್ರವೀಣ ಶಾಂತಪ್ಪ ಹಡಪದ, 587/625((ಶೇ.93.92) ತೃತೀಯ ಸ್ಥಾನ, ಅಂಕಿತಾ ಮ ಸಾಸನೂರ 586/625(ಶೇ.93.76) ಮತ್ತು ಕುಮಾರಿ ಅಂಬಿಕಾ ಮ ನಾಗೂರ 585/625(ಶೇ.93.06) ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಿಂದಿ ವಿಷಯದಲ್ಲಿ 03 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕನಕ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100ಕ್ಕೆ ಶೇ 91.75 ಫಲಿತಾಂಶ ಬಂದಿದ್ದು, ಪ್ರಥಮ ಸ್ಥಾನ ಫಯಾಜ ಯರನಾಳ 588/625(ಶೇ. 94.08), ದ್ವಿತೀಯ ಸ್ಥಾನ ಪೂಜಾ ಬಿರಾದಾರ 574/625(ಶೇ.91.84), ತೃತೀಯ ಸ್ಥಾನ ಗೊಲ್ಲಾಳಪ್ಪ ಯಲಗೋಡ 564/625(ಶೇ. 90.24) ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಿಂದಿ ವಿಷಯದಲ್ಲಿ 03 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ, 76 ವಿದ್ಯಾರ್ಥಿಗಳು ಪ್ರಥಮ, 32 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ
ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಮ್.ಸಜ್ಜನ ಹಾಗೂ ಕಾರ್ಯದರ್ಶಿ ವಿವೇಕಾನಂದ ಸಜ್ಜನ ಮುಖ್ಯಗುರು ಬಸವರಾಜ ಜಿ. ಸಜ್ಜನ ಮತ್ತು ಮುಖ್ಯ ಗುರುಮಾತೆ ರೇಣುಕಾ ದೇಸಾಯಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.