ಲೋಕದರ್ಶನ ವರದಿ
ವಿಜಯಪುರ 21:ವಿಜಯಪುರ-ಸೋಲಾಪುರ ಮಾರ್ಗವನ್ನು ಚತುಸ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮೇಲ್ದಜರ್ೆಗೇರಿಸುವ 1576.79 ಕೋಟಿ ರೂ. ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಇಂದು ಸೋಲಾಪುರ-ವಿಜಯಪುರ ಚತುಸ್ಪಥ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಈಗಾಗಲೇ ಕಾಮಗಾರಿಯು ಸಮರೋಪಾದಿಯಲ್ಲಿ ಸಾಗಿದ್ದು, 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಚತುಸ್ಪಥ ನಿಮರ್ಾಣದಿಂದ ಮಹಾರಾಷ್ಟ್ರ ಹಾಗೂ ಕನರ್ಾಟಕ ರಾಜ್ಯದ ಜನರಿಗೆ ಹಾಗೂ ಸರಕು-ಸಾಗಾಣಿಕೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಹೇಳಿದರು.
110 ಕಿ.ಮೀ. ಉದ್ದದ ಚತುಸ್ಪಥ ರಸ್ತೆಯ ಕಾಮಗಾರಿ ವ್ಯಾಪ್ತಿಗೆ 1 ಬೃಹತ್ ಪ್ರಮಾಣದ ಸೇತುವೆ ಹಾಗೂ 45 ಚಿಕ್ಕ ಚಿಕ್ಕ ಸೇತುವೆಗಳು ಬರಲಿವೆ. 2 ಫ್ಲೈಓವರ್, ಓವರ್ ಬ್ರಿಡ್ಜ್, 4 ವಾಹನ ಅಂಡರ್ಪಾಸ್ ಪಾದಚಾರಿಗಳಿಗಾಗಿ 8 ರಸ್ತೆ, ಒಳಗೊಂಡಿದೆ. ಈ ಕಾಮಗಾರಿಯಯನ್ನು 30 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದು, ಅದರನ್ವಯ ಗುತ್ತಿಗೆದಾರರು ಕೂಡ 24 ತಿಂಗಳಲ್ಲಿ ಈ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಅದರಂತೆ ಮಖನಾಪುರ ಬಳಿ 1 ಟೋಲ್ ನಾಕಾ ನಿಮರ್ಿಸಲಾಗುತ್ತಿದೆ. ಇದರಲ್ಲಿ 21 ಸವರ್ಿಸ್ ರಸ್ತೆಯನ್ನು ಒಳಗೊಂಡಿದೆ ಸುಮಾರು 20 ವರ್ಷಗಳವರೆಗೆ ಈ ರಸ್ತೆಯ ಉಸ್ತುವಾರಿಯನ್ನು ಐಜೆಎಂ ಕಂಪನಿಗೆ ವಹಿಸಲಾಗಿದೆ. ಈ ರಸ್ತೆ ಕಾಮಗಾರಿ ವ್ಯಾಪ್ತಿಗೆ ಬರುವ ಎಲ್ಲ ರೀತಿಯ ಪರಿಹಾರಗಳನ್ನು ಒದಗಿಸಲಾಗಿದ್ದು, ಸುಮಾರು 13 ಕೋಟಿ ರೂ. ಮಾತ್ರ ಬೇರೆ ಬೇರೆ ವೈಯಕ್ತಿಕ ಪ್ರಕರಣಗಳಿಂದ ಬಾಕಿ ಉಳಿದಿದೆ. ಇದರ ಜೊತೆಗೆ ವಿಜಯಪುರ ಸಂಕೇಶ್ವರ ಮಾರ್ಗದ ರಸ್ತೆ ಹೆದ್ದಾರಿ ಅಭಿವೃದ್ದಿ ಕಾಮಗಾರಿಗೆ ಹೊನವಾಡ ಗ್ರಾಮದವರೆಗೆ 40 ಕೋಟಿ ರೂ. ಮಂಜೂರಾಗಿ ಟೆಂಡರನ್ನು ಕರೆಯಲಾಗಿದೆ.
ಶಿರಾಡೋಣದಿಂದ ಲಿಂಗಸೂರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದಜರ್ೆಗೇರಿಸಲು ಮಂಜೂರಾತಿ ದೊರೆತಿದೆ., ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣಕ್ಕಾಗಿ ಶ್ರಮಿಸುತ್ತಿದ್ದು, ಯಾವುದೇ ಕಾರಣಕ್ಕೂ ಈ ವಿಮಾನ ನಿಲ್ದಾಣ ಕೈಬಿಡಲಾಗುವುದಿಲ್ಲ. ಇದಕ್ಕೆ ರಾಜ್ಯ ಸಕರ್ಾರದ ಸಹಕಾರ ಬೇಕಾಗಿದೆ ಎಂದು ಹೇಳಿದರು.
ವಿಶ್ವವಿಖ್ಯಾತ ಗೋಲಗುಮ್ಮಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಸಾಕಷ್ಟು ಪ್ರಯತ್ನ ಮಾಡಿರುವುದಾಗಿ ತಿಳಿಸಿದ ಅವರು, ಅದರೊಂದಿಗೆ ಧಾರವಾಡ ಜಿಲ್ಲೆಯಲ್ಲಿರುವ ಪುರಾತತ್ವ ಇಲಾಖೆಯನ್ನು ವಿಜಯಪುರಕ್ಕೆ ಸ್ಥಳಾಂತರಿಸುವ ಕುರಿತು ಈಗಾಗಲೆ ಹಲವಾರು ಬಾರಿ ಕೇಂದ್ರ ಸಚಿವರೊಂದಿಗೆ ಚಚರ್ಿಸಿದ್ದು, ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೇಲ್ವೆ ದ್ವಿಪಥ ಹಾಗೂ ವಿದ್ಯುತ್ ಕಾಮಗಾರಿಗಳು ಪ್ರಗತಿಯಲ್ಲಿದ್ದು,ಈ ಕಾಮಗಾರಿ ಪೂರ್ಣಗೊಂಡ ನಂತರ ವಿಜಯಪುರದಿಂದ ದೇಶದ ನಾನಾ ಭಾಗಗಳಿಗೆ ರೇಲ್ವೆ ಪ್ರಯಾಣಿಸುವುದು ಇನ್ನೂ ಸುಲಭ ಹಾಗೂ ಸರಳವಾಗಲಿದೆ. ಇಲ್ಲಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸುಮಾರು 1 ಗಂಟೆ ಸಮಯ ಉಳಿತಾಯವಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಎಸ್.ಕದಮ ಉಪಸ್ಥಿತರಿದ್ದರು.