ಸಿಡಿಲು ಬಡಿದು ಸಾವನಪ್ಪಿದ ಬಸವರಾಜ ಪರಿವಾರಕ್ಕೆ 5 ಲಕ್ಷ ರೂ ಪರಿಹಾರ ವಿತರಣೆ

Rs 5 lakh compensation distributed to Basavaraj family who died due to lightning strike

ನೇಸರಗಿ  29 : ಸಮೀಪದ ಸುತಗಟ್ಟಿ ಗ್ರಾಮದಲ್ಲಿ ದಿ. 26-3-2025 ರಂದು ಬಾರಿ ಗುಡುಗು ಸಹಿತ ಮಳೆಯಿಂದ 3  ಜನರಿಗೆ ಸಿಡಿಲು ಬಡಿದ ಪರಿಣಾಮವಾಗಿ  ಸುತಗಟ್ಟಿ ಗ್ರಾಮದ  ಬಸವರಾಜ ನಾಗಪ್ಪ ಸಂಗೊಳ್ಳಿ ಸ್ಥಳದಲ್ಲಿಯೇ ಮೃತಪಟ್ಟು ಇನಿಬ್ಬರಿಗೆ ತೀವ್ರ ಗಾಯಗಳಾಗಿದ್ದವು. ಅದಕ್ಕಾಗಿ ಇಂದು ಶನಿವಾರದಂದು ಸುತಗಟ್ಟಿ ಗ್ರಾಮಕ್ಕೆ  ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಬೇಟಿ ನೀಡಿ ಸರ್ಕಾರದ  5 ಲಕ್ಷ  ರೂಪಾಯಿಗಳ ಚೆಕ್‌ನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ತಹಸೀಲ್ದಾರ ಹಣಮಂತ ಶಿರಹಟ್ಟಿ ಮುಖಂಡ ಜಗದೀಶ ಪಾಟೀಲ ಪಿ ಡಿ ಓ  ವನಜಾಕ್ಷಿ ಪಾಟೀಲ ರಾಮಪ್ಪ ಬಳಗನ್ನವರ ಲಕ್ಷ್ಮಣ ಬಳಗನ್ನವರ ಸೇರಿದಂತೆ ಮೃತರ ಕುಟುಂಬಸ್ಥರು ಗ್ರಾಮಸ್ಥರು ಉಪಸ್ಥಿತರಿದ್ದರು.