ಲೋಕದರ್ಶನ ವರದಿ
ಬೆಳಗಾವಿ 28: ಇಲ್ಲಿನ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ ಐ ಟಿ)ದ ಮೆಕ್ಯಾನಿಕಲ್ ವಿಭಾಗದ ನಾಲ್ಕು ವಿದ್ಯಾಥರ್ಿಗಳಾದ ಸೋಹಮ್ ಕಲಘಟಗಿ, ಸಾಗರ್ ಕೆ. ಸಿರ್ಬ, ಸೌರಭ್ ತಂಬೆ ಮತ್ತು ಚೇತನ್ ಜೋಶಿ ಅವರನ್ನು ಒಳಗೊಂಡ ತಂಡವು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ ಎಸ ಎಲ್ ಗೊಂಬಿ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ "ಸ್ಪೇಸಿಯಲಿ ಎಬಲ್ಡ್ ಯುಟಿಲಿಟಿ ವೈಕಲ್ ಎಂಬ ಪ್ರಾಜೆಕ್ಟ್ ಪುಣೆಯ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಅವರು "ಪ್ರಯತ್ನ" ಎಂಬ ಕಾರ್ಯಕ್ರಮದಲ್ಲಿ ನಡೆಸಿದ ಸ್ಪಧರ್ೆಯಲ್ಲಿ ಶ್ರೇಷ್ಠ ಐದು ತಂಡಗಲ್ಲಿ ಸ್ತನವನ್ನು ಪಡೆದು 2 ಲಕ್ಷ ರೂ. ಗಳನ್ನೂ ಸಹಾಯಧನವನ್ನಾಗಿ ಪಡೆದುಕೊಂಡಿದೆ. ಈ ಪ್ರಾಜೆಕ್ಟ್ನ್ನು ಮುಖ್ಯವಾಗಿ ವಿಕಲಚೇತನರಿಗೆ ರೂಪಿಸಿದ್ದು ನಿದರ್ಿಷ್ಟವಾಗಿ ಡಬಲ್ ಲೆಗ್ ಅಂಪೂಟಿ, ವಿಶೇಷವಾಗಿ ಬಾಗಿರುವ, ಕಿವುಡ ಮತ್ತು ಮೂಕ ಜನರಿಗೆ ಸಹಾಯವಾಗುವಂತೆ ವಿನ್ಯಾಸಗೊಳಿಸಿದ್ದು ವಿಶೇಷವಾಗಿ ಸ್ಟೇರಿಂಗ್ ನ್ನು ಒಂದು ಕೈಯಿಂದ ಇನ್ನೊಂದು ಕೈನ್ನು ವೇಗವರ್ಧಕ, ಬ್ರೇಕ್ಗಳು, ಕ್ಲಚ್ ಮತ್ತು ಗೇರ್ ಬದಲಾಯಿಸಲು ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದರಿಂದ ಅವರು ನಾಲ್ಕು ಚಕ್ರ ವಾಹನವನ್ನು ಸುರಕ್ಷಿತವಾಗಿ ಓಡಿಸಬಹುದಾಗಿದೆ.
ಈ ಸ್ಪಧರ್ೆಯಲ್ಲಿ 200 ಕ್ಕಿಂತ ಹೆಚ್ಚು ತಾಂತ್ರಿಕ ಸಂಸ್ಥೆಗಳು ಭಾಗವಹಿಸಿದ್ದು, ಈ ಪೈಕಿ ಶ್ರೇಷ್ಟವಾಗಿರುವ ಕೇವಲ ಐದು ಯೋಜನೆಗಳನ್ನು ಮಾತ್ರ ಆಯ್ಕೆಮಾಡಲಾಗಿದೆ ಅದರಲ್ಲಿ ಜಿ ಐ ಟಿ ತಂಡವು ಒಂದಾಗಿದೆ. ಎಸ್. ಬಿ. ಪ್ರಧಾನ, ಹಬ್ಬೂ, ಕೇದಾರ ಹೆಂಡ್ರೆ ಮತ್ತು ಸಿದ್ಧಾಥರ್್ ಯಾವಾಲ್ಕರ್ ಅವರನ್ನು ಒಳಗೊಂಡ ತಾಂತ್ರಿಕ ತಜ್ಞರ ತಂಡ ಜಿ ಐ ಟಿ ಗೆ ಭೇಟಿಕೊಟ್ಟು ಈ ಪ್ರೊಜೆಕ್ಟದ ಹೊಸತನದ ಪರಿಕಲ್ಪನೆ ಮತ್ತು ನಾವೀನ್ಯತೆಯನ್ನು ಶ್ಲಾಘಿಸಿತು. ಜಿ ಐ ಟಿ ವಿದ್ಯಾಥರ್ಿಗಳ ಈ ಸಾಧನೆಯನ್ನು ಕೆ ಎಲ್ ಎಸ ಚೇರಮನ್ ಎಂ ಆರ್ ಕುಲಕಣರ್ಿ, ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ, ಕನರ್ಾಟಕ್ ಲಾ ಸೊಸೈಟಿಯ ಎಲ್ಲ ಸದ್ಯಸರು, ಪ್ರಾಚಾರ್ಯ ಡಾ ಎ. ಎಸ. ದೇಶಪಾಂಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ ಕಿತ್ತೂರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.