ಸಮರ್ಥನಂ ಅಂಗವಿಕಲರ ಸಂಸ್ಥೆಯ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂನರ್ಿಗೆ ಚಾಲನೆ ಸೋಲು ಗೆಲುವುಗಳ ಬಗ್ಗೆ ಚಿಂತಿಸದೇ ವಹಿಸಿ : ಸಿಇಒ ರಾಮಚಂದ್ರನ್

ಲೋಕದರ್ಶನ ವರದಿ

ಬೆಳಗಾವಿ, 18: ಸೋಲು ಗೆಲುವಿಗೆ ಸೋಪಾನ. ಅಂಧ ಕ್ರಿಕೆಟಿಗರು ಸೋಲು ಗೆಲುವಿನ ಬಗ್ಗೆ ಚಿಂತಿಸದೇ ಭಾಗವಹಿಸುವಿಕೆ ಕಡೆ ಗಮನಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ರಾಮಚಂದ್ರನ್ ಆರ್. ಸಲಹೆ ನೀಡಿದ್ದಾರೆ. 

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ಆಯೋಜಿಸಿದ್ದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂನರ್ಿಯನ್ನು ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.  

ಕ್ರೀಡೆಯಷ್ಟೇ ಅಲ್ಲ, ಭಾರತ ಕಟ್ಟುವುದಕ್ಕಾಗಿಯೂ ಅಂಧರು ಲಕ್ಷ್ಯ ವಹಿಸಬೇಕು. ಪ್ರತಿ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಬೇಕು. ಈಗ ಅಜರ್ಿ ಸಲ್ಲಿಸಿ, ಮತದಾರರ ಗುರುತಿನ ಚೀಟಿ ಹೊಂದಬೇಕು. ಸದೃಢ ಭಾರತ ನಿಮರ್ಾಣಕ್ಕೆ ಕೈಜೋಡಿಸಬೇಕು ಎಂದು ಕರೆಕೊಟ್ಟರು.ವಿಶ್ವ ಅಂಧರ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮಹಾಂತೇಶ ಕಿವಡಸಣ್ಣವರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿಯ ಮುಖ್ಯಸ್ಥ ಅರುಣಕುಮಾರ ಎಂ., ಮ್ಯಾರಿಯೇಟ್ ಹೊಟೇಲ್ ಮ್ಯಾನೇಜರ್ ರೋಹಿತ್, ಏಕಸ್ ಕಂಪೆನಿಯ ಸಿಎಸ್ಆರ್ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ ಮತ್ತಿತರರು ಉಪಸ್ಥಿತರಿದ್ದರು.