ವಕ್ಫ್ ತಿದ್ದುಪಡಿ ಮಸೂದೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ದೇವರಹಿಪ್ಪರಗಿ:ಕೇಂದ್ರ ಸರ್ಕಾರ ಕೈಗೊಂಡಿರುವ ವಕ್ಫ್ ಬೋರ್ಡ್ ಮಸೂದೆ ತಿದ್ದುಪಡಿ ಹಾಗೂ ರಾಜ್ಯ ಸಭೆಯಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್ ರಫೀಕ್ ಪಾನಪುರೋಶ್ ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷ ಅಜೀಜ ಮರೋಳ ಮಾತನಾಡಿ, ರಾಜ್ಯ ಸಭೆಯಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಟುವಾಗಿ ವಿರೋಧಿಸುತ್ತೇವೆ. ಈ ಮಸೂದೆ ಪಕ್ಷಪಾತದಿಂದ ಕೂಡಿದ್ದು, ಅಸಾಂವಿಧಾನಿಕ ಮತ್ತು ಮುಸ್ಲಿಂ ವಿರೋಧಿಯಾಗಿದೆ. ಮುಸ್ಲಿಂ ಸಮುದಾಯದ ಸಂಘಟನೆಗಳ, ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಪರಿಗಣಿಸದೆ, ಜನರ ಹಿತಾಸಕ್ತಿಗೆ ಕೇಂದ್ರ ಸರ್ಕಾರ ಧಕ್ಕೆ ತರುತ್ತಿದೆ. ಎಸ್.ಡಿ.ಪಿ.ಐ ಈ ಮಸೂದೆಯನ್ನು ತಿರಸ್ಕರಿಸಲು ಭಾರತಿಯ ಜನತೆಗೆ ಕರೆ ನೀಡುತ್ತದೆ ಎಂದು ಹೇಳಿದರು.
ಅಂಜುಮನ್ ತಾಲೂಕು ಘಟಕದ ಅಧ್ಯಕ್ಷ ಮಹಬೂಬ ಹುಂಡೆಕಾರ, ಇಕ್ಬಾಲ್ ಬಿಜಾಪುರ, ಶಬ್ಬೀರ ಹತ್ತರಕಿಹಾಳ, ಜಾವೀದ್ ದಿಡ್ಡಿ, ಶನವಾಜುಮಹ್ಮದ್ ಮರೋಳ, ಮಿಪಾಸಾ ಶಿರೋಳ, ಇಸ್ಮಾಯಿಲ ಮರೋಳ ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.