ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮದ್ಯಪಾನ ಮಾಡುವವರ ಮೇಲೆ ಕ್ರಮ ಎಸ್.ಪಿ ಜೋಶಿ ಎಚ್ಚರಿಕೆ

ಗದಗ 06: ಗಣೇಶೋತ್ಸವದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವತರ್ಿಸುವ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ ಎಚ್ಚರಿಸಿದ್ದಾರೆ.

ಇಲ್ಲಿಯ  ನಾಮಜೋಷಿ ರಸ್ತೆಯಲ್ಲಿನ  ತರುಣ ವ್ಯಾಪಾರಸ್ಥರ ಸಂಘದಾಶ್ರಯದಲ್ಲಿ ಜರುಗಿದ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ಕೆಲವರು ಗಣೇಶೋತ್ಸವದಲ್ಲಿ ಕುಡಿದು ಕುಪ್ಪಳಿಸುತ್ತಿದ್ದಾರೆ. ಗಣೇಶೋತ್ಸವದಲ್ಲಿ ಸಂಭ್ರಮದಿಂದ ಕುಪ್ಪಳಿಸಲು ಯಾವದೇ ಅಭ್ಯಂತರವಿಲ್ಲ. ಆದರೆ ಯಾವದೇ ವ್ಯಕ್ತಿ ಸರಾಯಿ ಕುಡಿದು ಅಸಭ್ಯವಾಗಿ ವತರ್ಿಸಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು. ಪೊಲೀಸ್ ಇಲಾಖೆಗೆ ಈ ಬಗ್ಗೆ ಗಣೇಶೋತ್ಸವ ಮಂಡಳಿಗಳು ಸೂಕ್ತ ಸಹಕಾರ ನೀಡುವಂತೆ ಮನವಿ ಮಾಡಿದರು. ಬಾಲಗಂಗಾಧರನಾಥ ತಿಲಕರು ಪ್ರಾರಂಭಿಸಿದ ಗಣೇಶೋತ್ಸವದ ಆಶಯದಂತೆಯೇ ಗದಗ ಜಿಲ್ಲೆಯಲ್ಲಿಯೂ ಗಣೇಶೋತ್ಸವ ನಡೆಯಬೇಕೆಂಬುದು ತಮ್ಮ ಆಶಯವಾಗಿದೆ. ಗಣೇಶ ಮೂತರ್ಿ ವಿಸರ್ಜನೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆ ಅತ್ಯಂತ ಶಾಂತಿಯುತವಾಗಿ ನಡೆಯಬೇಕು. ಈ ದಿಸೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಪದಾಧಿಕಾರಿಗಳು ಶ್ರಮಿಸಬೇಕು. ಆ ಮೂಲಕ ಇಡೀ ದೇಶದಲ್ಲಿಯೇ ಮದ್ಯಪಾನ ಮುಕ್ತ ಜಿಲ್ಲೆಯೆಂಬ ಖ್ಯಾತಿಗೆ ಗದಗ ಜಿಲ್ಲೆಯಾಗಬೇಕೆಂಬುದು ತಮ್ಮ ಆಶಯವಾಗಿದೆಯೆಂದು ಹೇಳಿದರು.ಗಜಾನನೋತ್ಸವ ಮಹಾಮಂಡಳಿಯ ಅಧ್ಯಕ್ಷ ರಾಜೂ ಖಾನಪ್ಪನವರ, ಮೋಹನ ಮಾಳಶೆಟ್ಟಿ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ತಯಾರಿಸಿದ ಭಿತ್ತಿಪತ್ರವನ್ನು ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಶ್ರೀನಾಥ ಜೋಷಿ ಉದ್ಘಾಟಿಸಿದರು.

ವೇದಿಕೆಯ ಮೇಲೆ ತರುಣ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಜ್ಜಣ್ಣ ಮಲ್ಲಾಡದ, ಗ್ರೇನ್ ಮಾಕರ್ೆಟ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಧೀರಜ ಜೈನ, ಅಜಿತ ಹೊಂಬಾಳಿ, ಕಿಶನ್ ಮೆರವಾಡೆ, ಶಂಕರ ಮುಳಗುಂದ, ಸಂತೋಷ ಮೆಲಗಿರಿ, ರಾಜೂ ಮಲ್ಲಾಡದ, ರಾಜೂ ಮುಧೋಳ, ವಿ.ಕೆ.ಮಟ್ಟಿ, ರಾಘವೇಂದ್ರ ಪವಾರ, ಕಿರಣ ಹಿರೇಮಠ, ಸುನೀಲ ಕಬಾಡಿ, ವಿಶ್ವನಾಥ ಸೀರಿ, ಶಿವು ಹಿರೇಮನಿಪಾಟೀಲ ಮುಂತಾದವರಿದ್ದರು.