ಸಡಗರದ ಅಯ್ಯಪ್ಪಸ್ವಾಮಿ ಮಹಾಪೂಜೆ- ಮಹಾಪ್ರಸಾದ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ,23: ಸ್ಥಳೀಯ ಕಣಬಗರ್ಿ ರಸ್ತೆ ರುಕ್ಮಿಣಿ ನಗರದ ಶ್ರೀನವದುಗರ್ಾ ಶ್ರೀ ಅಯ್ಯಪ್ಪ ಸ್ವಾಮಿಯ 22ನೇ ಮಹಾಪೂಜೆ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ದಿ.22 ಹಾಗೂ 23ರಂದು ಜರುಗಿತು.

ದಿ.22 ರಂದು ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು. ಈ ನಿಮಿತ್ತ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರದ ಮೆರವಣಿಗೆ ನಡೆಯಿತು.

ದಿ.23 ರಂದು ಮುಖ್ಯ ಪೂಜಾ ಕಾರ್ಯಕ್ರಮ ಜರುಗಿತು. ಈ ನಿಮಿತ್ತ ಶ್ರೀ ಅಭಿಷೇಕ ಸಹಸ್ರ ನಾಮಾರ್ಚನೆ, ಭಜನೆ ಮಂಗಳಾರತಿ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಸಾವಿರಾರು ಜನ ಪ್ರಸಾದ ಸೇವಿಸಿದರು. ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು. ಪ್ರಧಾನ ಅರ್ಚಕ ಸುರೇಂದ್ರ ಗುರುಸ್ವಾಮಿಗಳು ನೇತೃತ್ವ ವಹಿಸಿದ್ದರು.

ಈ ಮಹಾಪೂಜಾ ಕಾರ್ಯಕ್ರಮಕ್ಕೆ ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಮಹಾಪೌರ ಬಸವರಾಜ ಚಿಕ್ಕಲದಿನ್ನಿ, ಹೊಟೇಲ ಉದ್ಯಮಿ ವಿಠ್ಠಲ ಹೆಗಡೆ ಅವರು ಭೇಟಿ ನೀಡಿ ಆಶೀವರ್ಾದ ಪಡೆದರು.

ಕಾರ್ಯಕ್ರಮದಲ್ಲಿ ಆನಂದ ಶೆಟ್ಟಿ, ಭಾಸ್ಕರ ಪೂಜೇರಿ, ಚೇತನ ಶೆಟ್ಟಿ, ಪ್ರಕಾಶ ಶೆಟ್ಟಿ, ಸುರೇಶ ನಾಯ್ಯರ, ಸತೀಶ ಶೆಟ್ಟಿ, ಮಹಾವೀರ ಜೈನ, ದೀಪಕ ಶಹಾಪೂರ, ಅಶೋಕ ಶಹಾಪೂರ, ಸದಾಶಿವ ಹಿರೇಮಠ, ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ, ರಮೇಶ ಪೋತದಾರ, ಗೋಪಾಲ ಖಟಾವಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.