ಐಸಿಟಿಯ ಸುರಕ್ಷಿತ ಬಳಕೆ ಅಗತ್ಯ: ಬಸರಕೋಡ

Safe use of ICT is essential: Basarakoda

ತಾಳಿಕೋಟಿ 29: ಐಸಿಟಿಯಿಂದ ಹಲವು ವಿಷಯಗಳು ಪ್ರಭಾವಿತಗೊಂಡಿದೆ ಇದನ್ನು ಹೇಗೆ ನೈತಿಕವಾಗಿ ಮತ್ತು ಸುರಕ್ಷಿತವಾಗಿ ಬಳಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಎಲ್ಲರೂ ಪ್ರಯೋಜನ ಪಡೆಯುವ ರೀತಿಯಲ್ಲಿ ಐಸಿಟಿ ಅನ್ನು ಬಳಸಬೇಕು. ಪ್ರತಿಯೊಬ್ಬರೂ ಅವಶ್ಯಕತೆಗಳಿಗೆ ಅನುಗುಣವಾಗಿ ಐಸಿಟಿ ಬಳಸಲು ಸಾಧ್ಯವಾಗುತ್ತದೆ. ಸಾಮಾನ್ಯ ಸಂಪನ್ಮೂಲ, ಸಾರ್ವಜನಿಕ ಉತ್ತಮ ಸಾರಿಗೆ, ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯದಂತೆ ಐಸಿಟಿಯನ್ನು ಸಹ ಪರಿಗಣಿಸಬೇಕು ಎಂದು ಮಹಾಂತೇಶ ಬಸರಕೋಡ ಹೇಳಿದರು.  

ಶುಕ್ರವಾರ ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೊಎಸ್‌ಸಿ ಸಂಯೋಜಿತ ಐಸಿಟಿ ವಿಷಯದಲ್ಲಿ ಒಂದು ದಿನದ ವಿಶೇಷ ಉಪನ್ಯಾಸದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ತಂತ್ರಜ್ಞಾನದ ಬಳಕೆಯಿಂದ ಇಂದು ಸಂವಹನ ಅತ್ಯಂತ ಸುಲಭವಾಗಿದೆ. ಮೊಬೈಲ್, ದೂರವಾಣಿನಂತಹ ಅನನ್ಯ ಸಾಧನ ಗೀಳನ್ನು ಪರಿಚಯಿಸಲಾಗಿದೆ. ಇವುಗಳ ಸಹಾಯದಿಂದ ಜನರು ಎಷ್ಟೂ ದೂರದಲ್ಲಿದ್ದರು ಒಬ್ಬರನ್ನೊಬ್ಬರು ಸಂಪರ್ಕ ಮಾಡಲು ಸುಲಭವಾಗಿದೆ. ಫೋಟೋಗಳನ್ನು, ವೀಡಿಯೊಗಳನ್ನು ಸಾಮಾಜಿಕ ನೆಟ್ವರ್ಕಿಂಗ್ ಸೈಟ ಮೂಲಕ ಹಂಚಿಕೊಳ್ ಬಹುದಾಗಿದೆ. ಒಂದು ವೀಡಿಯೊ ಮೂಲಕ ಜನರು ಸಂವಹನ ಮಾಡಬಹುದಾದ ಒಂದು ವೈಶಿಷ್ಟತೆಯನ್ನು ಇದು ಹೊಂದಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಡಾ. ಆರ್‌.ಎಂ. ಬಂಟನೂರ ಪ್ರಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ ತಂತ್ರಜ್ಞಾನದ ಬಳಕೆಯಿಂದ ಮಕ್ಕಳಿಗೆ ಪಾಠ ಕಲಿಯಲು ಸುಲಭವಾಗಿದೆ. ತಂತ್ರಜ್ಞಾನ ಬೋಧನೆ ಮತ್ತು ಕಲಿಕೆ ಎರಡನ್ನು ಬೆಂಬಲಿಸಲು ಬಳಸಲಾಗುತ್ತದೆ. ತರಗತಿಗಳಲ್ಲಿ ಕಂಪ್ಯೂಟರ್ ಜೊತೆ ಡಿಜಿಟಲ್ ಕಲಿಕೆಯನ್ನು ಪರಿಚಯಿಸಲಾಗಿದೆ. ಇಂತಹ ಸೌಲಭ್ಯಗಳು ವಿದ್ಯಾರ್ಥಿಗಳ ಭಾಗವಹಿಸಿಕೆ ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತದೆ. ಆನ್ಲೈನ್ ಕಲಿಕೆಯ ತುಂಬಾ ಅವಕಾಶಗಳು, ಮುಕ್ತ ಶೈಕ್ಶಣಿಕ ಸಂಪನ್ಮೂಲಗಳು ಮತ್ತು ಇತರ ತಂತ್ರಜ್ಞಾನಗಳ ಬಳಕೆಯಿಂದ ಕಲಿಕೆಯ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದ ವೇದಿಕೆ ಮೇಲೆ ಐಕ್ಯುಎಸಿ ಸಂಯೋಜಕ ಉಮೇಶ್ ಮಂಗೊಂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ ಹಾಗೂ ಪ್ರಥಮ, ತೃತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಕು. ನಿವೇದಿತಾ ಮಠ ಹಾಗೂ ಕು. ಪೂರ್ಣಿಮಾ ಪ್ರಾರ್ಥಿಸಿದರು ಕು. ರೂಪಾ ಸ್ವಾಗತಿಸಿ ಪರಿಚಯಿಸಿದರು. ಕು. ನಕ್ಷತ್ರ ಅಚನೂರ್ ಕಾರ್ಯಕ್ರಮ ನಿರೂಪಿಸಿದರು.