ಮಗನನ್ನು ತೆರೆಯ ಮೇಲೆ ತರಲು ಸೈಫ್ ತಯಾರಿ

ಮುಂಬೈ, ಮಾ.19, ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ತಮ್ಮ ಪುತ್ರ ಇಬ್ರಾಹಿಮ್ ಅಲಿ ಖಾನ್ ಅವರನ್ನು ತೆರೆಯ ಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ. ಸೈಫ್ ಹಾಗೂ ಅಮೃತ್ ಅವರ ಮಗಳು ಸಾರಾ ಈಗಾಗಲೇ ಚಿತ್ರದಲ್ಲಿ ಕೆಲಸ ಶುರುಮಾಡಿದ್ದಾಳೆ. ಇನ್ನು ಸೈಫ್ ತಮ್ಮ ಮಗನಿಗೆ ಬಾಲಿವುಡ್ ಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ. ಇತ್ತಿಚಿಗೆ ಇಬ್ರಾಹಿಮ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇವುಗಳಿಗೆ ಸಾಮಾಜಿಕ ತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿತ್ತು.
 “ಇಬ್ರಾಹಿಮ್ ಬಾಲಿವುಡ್ ಗೆ ಕಾಲಿಡುತ್ತಾನೆ, ನಾನು ಅವನಿಗೆ ಬಣ್ಣ ಹಚ್ಚಲು ಸಹಾಯ ಮಾಡುತ್ತೇನೆ ಎಂಬುದು ನನಗೆ ತಿಳಿದಿಲ್ಲ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ. ಇಬ್ರಾಹಿಮ್ ಒಂದು ಆಯ್ಕೆ ಮತ್ತು ಈ ಚಿತ್ರವು ಅವರಿಗೆ ಉತ್ತಮ ವೃತ್ತಿಜೀವನದ ಆಯ್ಕೆಯಾಗಿದೆ. ಅವರು ಚಿತ್ರಕ್ಕೆ ಬರುಲು ಇಷ್ಟಪಡುತ್ತಾರೆ. ಅವರ ಸಹೋದರಿ ಸಾರಾ ಅವಳನ್ನು ಬಿಟ್ಟರೆ ಕುಟುಂಬಸ್ಥರು ಈ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ” ಎಂದು ತಿಳಿಸಿದ್ದಾರೆ.
  ಚಿತ್ರ ಜಗತ್ತು ಬೇರೆಯದ್ದೇ ಪ್ರಪಂಚ. ಇಲ್ಲಿ ಮಾನದಂಡಗಳು ಬದಲಾಗಿವೆ. ನಾನು ಆತನಿಗೆ ಸರಿಯಾಗಿ ತಯಾರಿ ನಡೆಸಿ,  ಉತ್ತಮ ಚಿತ್ರದ ಆಯ್ಕೆ ಮಾಡುವಂತೆ ಸಲಹೆ ನೀಡುತ್ತೆನೆ. ನನ್ನ ಮಕ್ಕಳು ನಟನೆಯತ್ತ ಒಲವು ತೋರಿದರೆ ನನಗೆ ಇಷ್ಟ. ಇಬ್ರಾಹಿಮ್ ಕಾಣಲು ಚೆನ್ನಾಗಿದ್ದು, ಆಕರ್ಷಕವಾಗಿದ್ದಾನೆ. ಮೊದಲು ಆತ ವಿದ್ಯಾಭ್ಯಾಸ ಮುಗಿಸಲಿ ನಂತರ ಬಾಲಿವುಡ್ ನತ್ತ ಮುಖ ಮಾಡಲಿ” ಎಂದು ಸೈಫ್ ಹೇಳಿದ್ದಾರೆ.