ಲೋಕದರ್ಶನ ವರದಿ
ಕೊಪ್ಪಳ 07: ಪಕ್ಕದ ಗೋವಾ ರಾಜ್ಯದ ಬಿಚ್ಚೋಲಿಯಂ ನಗರದಲ್ಲಿ ಇದೆ ತಿಂಗಳ ಜೂನ್ 16ರ ಭಾನವಾರದಂದು ಕರ್ನಾಟಕ ಜಾಗೃತಿ ವೇತಿಕೆ ಬೆಂಗಳೂರು ಹಾಗೂ ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿ ಇವುಗಳ ಸಂಯುಕ್ತ ಅಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಜರುಗಲಿರುವ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಧುಸೇವಾಶ್ರಮ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸ್ಯಾಮ್ ಸನ್ ಸಂತೋಷರವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಾಗಿ ಪ್ರತಿಷ್ಠೀತ ಕರುನಾಡ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲು ನಿರ್ಣಯಿಸಲಾಗಿದೆ.
ಯಲಬುಗರ್ಾದಲ್ಲಿ ಜರುಗಿದ ವಸತಿ ನಿಲಯ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ ಕನರ್ಾಟಕ ಜಾಗೃತಿ ವೇದಿಕೆಯ ಪರವಾಗಿ ಪ್ರಮಾಣ ಪತ್ರ ಶ್ರೀಗಳವರ ಅಮೃತ ಹಸ್ತದಿಂದ ಸ್ಯಾಮ್ ಸನ್ ಸಂತೋಷರವರಿಗೆ ನೀಡಿ ಅಶಿರ್ವದಿಸಿದರು.
ಜೂನ್16ರಂದು ಗೋವಾ ರಾಜ್ಯದ ಬಿಚ್ಚೋಲಿಯಂ ನಗರದ ಹೀರಾಬಾಯಿ ಹಾಲ್ ನಲ್ಲಿ ಜರುಗಲಿರುವ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾದಕರಿಗೆ ನೀಡುವ ಪ್ರಶಸ್ತಿ ಪ್ರಾಧನ ಸಮಾರಂಭದಲ್ಲಿ ಸ್ಯಾಮ್ ಸನ್ ಸಂತೋಷರವರಿಗೆ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಕಾರ್ಯಕ್ರಮದ ಸಂಘಟಕರಾದ ಮಹೇಶ ಬಾಬು ಸುವರ್ೆ ಮತ್ತು ಶಿವ ಬಾಲ ಸ್ವಾಮಿರವರು ಜಂಟಿ ಪ್ರಕಟಣೆ ಮೂಲಕ ತಿಳಿಸಿ ಸಮ್ಮೇಳನದಲ್ಲಿ ಈ ಭಾಗದ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡು ಸರ್ವರನ್ನು ಸ್ವಾಗತಿಸಿದ್ದಾರೆ.