ಶಂಕರಾಚಾರ್ಯರ ತತ್ವ-ಆದರ್ಶಗಳು ನಮಗೆ ಮಾದರಿ: ಯೋಗೇಶ್ವರ

ಹಾವೇರಿ: ಎ.28: ಶಂಕರಾಚಾರ್ಯರ ತತ್ವ ಆದರ್ಶಗಳು ನಮಗೆ ಮಾದರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಹೇಳಿದರು. 

ಕೋವಿಡ್-19 ಸೋಂಕು ತಡೆಯುವ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಮಂಗಳವಾರ ಶಂಕರಾಚಾರ್ಯರ ಜಯಂತಿಯನ್ನು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಯಿತು.

ಶಂಕರಾಚಾರ್ಯರು ಜಾತ್ಯಾತೀತ ತತ್ವದ ಪ್ರತಿಪಾದಕರು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದವರು. ಇವರ ಧಾಮರ್ಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ನಮಗೆಲ್ಲಾ ದಾರಿದೀಪಗಳಾಗಿವೆ ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ರಮೇಶ ದೇಸಾಯಿ ಅವರು ಮಾತನಾಡಿ, ಶಂಕರಾಚಾರ್ಯರು ದಾರ್ಶನಿಕರು. ಇವರು  ಕಾಲ್ನಡಿಗೆಯಿಂದ ದೇಶವನ್ನು ಸುತ್ತಿ ಅನೇಕ ದೈವ ಸಂದೇಶಗಳನ್ನು ಸಾರಿದ್ದಾರೆ. 

   ಶಂಕರಾಚಾರ್ಯರು ನಮ್ಮ ರಾಜ್ಯದಲ್ಲಿರುವ ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿ ಜಾಗೃತ ಕ್ಷೇತ್ರ,  ಹಾಗೂ ಪುಣ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಮಹಾತ್ಮರ ಬದುಕಿನಲ್ಲಿರುವ ಆದರ್ಶಗಳನ್ನು ಪಾಲಿಸುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತೇದಾರ ಪ್ರಶಾಂತ ನಾಲವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶ್ರೀಮತಿ ಶಶಿಕಲಾ ಹುಡೇದ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.