ಸೌಲಭ್ಯಕ್ಕೆ ಪ್ರತಿಯಾಗಿ ಉತ್ತಮ ವಿದ್ಯಾರ್ಥಿ ಗಳಾಗಿ ಹೆಚ್ಚಿನ ಅಂಕಗಳಿಸಿ: ಸಚಿವ ಸಿ.ಸಿ.ಪಾಟೀಲ

ಗದಗ  (ಲಕ್ಕುಂಡಿ) 09:  ಸಕರ್ಾರಿ ಹಾಗೂ ಅನುದಾನಿತ ಶಾಲಾ ವಿದ್ಯಾಥರ್ಿಗಳಿಗೆ ಸಕರ್ಾರ ಪಠ್ಯ, ಸಮವಸ್ತ್ರ, ಶೂ, ಕಾಲಚೀಲ, ಸೈಕಲ್, ಮಧ್ಯಾಹ್ನ ಬಿಸಿಯೂಟ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದು  ಇದಕ್ಕೆ ಪ್ರತಿಯಾಗಿ  ಸಕರ್ಾರಕ್ಕೆ  ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂದು ವಿದ್ಯಾಥರ್ಿಗಳು ಪ್ರಶ್ನಿಸಿಕೊಳ್ಳಬೇಕು. ಈ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಹೆಚ್ಚಿನ ಅಂಕ ಗಳಿಸಿ ಉತ್ತಮ ಪ್ರಜೆಗಳಾಗಲು  ಪ್ರಯತ್ನಿಸಬೇಕು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ನುಡಿದರು.  

          ಲಕ್ಕುಂಡಿಯ ಬಾಲಕಿಯರ ಸಕರ್ಾರಿ ಪ್ರೌಢಶಾಲೆಯಲ್ಲಿಂದು ಎಂಟನೇ ತರಗತಿಯ ವಿದ್ಯಾಥರ್ಿನಿಯರಿಗೆ ಉಚಿತ ಸೈಕಲ್, ಸಮವಸ್ತ್ರ  ಹಾಗೂ ದಿನಚರಿಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.  ವಿದ್ಯಾಥರ್ಿಗಳ ಸಮಯ ಉಳಿತಾಯ, ಆರೋಗ್ಯ ವೃದ್ಧಿ ದೃಷ್ಟಿಯಿಂದ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಉಚಿತ ಸೈಕಲ್ ವಿತರಣೆ ಯೋಜನೆ ಜಾರಿಗೊಳಿಸಿದ್ದರು.  ಅದನ್ನು ನಂತರದ ಸಕರ್ಾರಗಳು ಮುಂದುವರೆಸಿಕೊಂಡು ಬಂದಿರುವುದು ಸ್ವಾಗತಾರ್ಹವಾಗಿದೆ.  ಸಕರ್ಾರ ಎಲ್ಲ ರೀತಿ  ಸೌಲಭ್ಯಗಳನ್ನು ಶಿಕ್ಷಣಕ್ಕೂ ನೀಡುತ್ತಿದ್ದರೂ ಗದಗ ಜಿಲ್ಲೆ ಫಲಿತಾಂಶ ಮಾತ್ರ ಇನ್ನೂ ಕೆಳಮಟ್ಟದಲ್ಲಿ ಇರುವುದು ಖೇದಕರ.  ಶಿಕ್ಷಕರು, ವಿದ್ಯಾಥರ್ಿಗಳು ಜೊತೆಗೆ ಪಾಲಕರೂ ಕೂಡ ಈ ಕುರಿತು ಚಿಂತನೆ  ನಡೆಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.  ಶಿಕ್ಷಣ ಕಲಿಕೆ, ಕಲಿಸುವಿಕೆ ಎಂಬ ವಿಷಯಗಳಿಗೆ ಪ್ರಾಧ್ಯಾನ್ಯತೆ ನೀಡಬೇಕು ಎಂದು ಸಚಿವರು ನುಡಿದರು.

         ಲಕ್ಕುಂಡಿಯ ಬಾಲಕಿಯರ ಸಕರ್ಾರಿ  ಪ್ರೌಢಶಾಲೆ ಆವರಣದಲ್ಲಿ  ಹಳೆಯ ಕಟ್ಟಡ 150  ವರ್ಷದ ಹಿರಿಯ ಶಾಲೆಯಾಗಿದ್ದು ಅದರ ಕಟ್ಟಡ ನವೀಕರಣ ಕುರಿತು 79 ಲಕ್ಷ ರೂ.ಗಳ ಅನುದಾನವನ್ನು ರಾಜ್ಯ ಸಕರ್ಾರದಿಂದ ಬಿಡುಗಡೆ ಮಾಡಿಸುವ ಭರವಸೆಯನ್ನು ಸಚಿವ ಪಾಟೀಲ ನುಡಿದರಲ್ಲದೇ  ಶಾಲೆ ಆವರಣದಲ್ಲಿ ಹೆಚ್ಚು ಹೆಚ್ಚು ಗಿಡಮರ ಬೆಳೆಸಲು ಹಾಗೂ ಸ್ವಚ್ಛವಾಗಿಡಲು ಸಲಹೆ ಮಾಡಿದರು. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ 2080 ಸೈಕಲ್ ವಿತರಿಸಲಾಗುತ್ತಿದ್ದು ಲಕ್ಕುಂಡಿ ಶಾಲೆಯಲ್ಲಿ 79 ಸೈಕಲ್ ಗಳನ್ನು ವಇದ್ಯಾಥರ್ಿನಿಯರಿಗೆ ವಿತರಿಸಲಾಯಿತು. 

ಗದಗ ತಾ.ಪಂ. ಉಪಾಧ್ಯಕ್ಷೆ ಸುಜಾತಾ ಖಂಡು,   ಜಿ.ಪಂ. ಸದಸ್ಯ ಸಿದ್ದು ಪಾಟೀಲ, ಲಕ್ಕುಂಡಿ ಗ್ರಾ. ಪಂ. ಅಧ್ಯಕ್ಷ ಶಿವಪುತ್ರಪ್ಪ ಬೂದಿಹಾಳ, ಉಪಾಧ್ಯಕ್ಷೆ ಪ್ರೇಮಾ ಮಟ್ಟಿ,  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಎನ್.ಎಚ್. ನಾಗೂರ,  ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಅಕ್ಷರ ದಾಸೋಹ ತಾಲೂಕಾಧಿಕಾರಿ ಕೆ.ವೈ. ವಿಭೂತಿ, ಬಾಲಕಿಯರ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಬೇರಪ್ಪ ಬಡಿಗೇರ, ಮುಖ್ಯೋಪಾಧ್ಯಾಯ ಸಿ.ಸಿ. ಕುರಹಟ್ಟಿ, ಗ್ರಾಮದ ಜನಪ್ರತಿನಿಧಿಗಳು, ಗುರು ಹಿರಿಯರು, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾರ್ಥಿ ನಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.