ಲೋಕದರ್ಶನವರದಿ
ರಾಣೇಬೆನ್ನೂರು: ಇಲ್ಲಿನ ವಿಶ್ವಬಂಧು ನಗರದಲ್ಲಿ ಅನರ್ಹ ಶಾಸಕ ಆರ್.ಶಂಕರ್ ಅವರ ಬೆಂಬಲಿಗ ಕಾರ್ಯಕರ್ತರು ಅವರ ಪಕ್ಷಾಂತರದ ವರ್ತನೆಗೆ ಬೇಸತ್ತು ಕೆ.ಬಿ.ಕೋಳಿವಾಡ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಹರಿಹರದ ಶಾಸಕ ಎಸ್. ರಾಮಜ್ಜ, ಎಮ್ಮೆಲ್ಸಿ ಜಬ್ಬಾರ್ ಸಾಹೇಬ, ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಪಕ್ಷದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲ ಮುಖಂಡರನ್ನು ಉಪ-ಚುನಾವಣಾ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪಕ್ಷದ ಶಾಲು ಹೊದಿಸಿ, ಸನ್ಮಾನಿಸಿ ಬರಮಾಡಿಕೊಂಡರು.
ಕೆಪಿಜೆಪಿ ಪಕ್ಷದ ನಗರಸಭೆ ಸದಸ್ಯರುಗಳಾದ ನೂರುಲ್ಲಾ ಖಾಜಿ, ಕೆ.ಎಂ.ಪಿ.ಮಣಿ ಮತ್ತು ನಿಂಗಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಉಪ ಚುನಾವಣೆಯಲ್ಲಿ ಬಾಹ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮಾತನಾಡಿ ನಿಮ್ಮೆಲ್ಲರ ಸೇವೆ ಮಾಡಲಿಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನೀವು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ.
ನೀವೆಲ್ಲರೂ ನನಗೆ ಬೆಂಬಲಿಸುತ್ತ ಬಂದಿರುವುದರಿಂದಲೇ ನಾನು ರಾಜಕೀಯವಾಗಿ ಇಂದಿಗೂ ಜೀವಂತವಾಗಿದ್ದೇನೆ. ಬೇರೆಯವರ ಕೈಯಲ್ಲಿ ನಮ್ಮ ಕ್ಷೇತ್ರವನ್ನು ಕೊಟ್ಟಿದ್ದರಿಂದ ಒಂದೂವರೆ ವರ್ಷ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಸೂರ್ಯನಿಗೂ ಒಂದೊಂದು ಬಾರಿ ಗ್ರಹಣ ಹಿಡಿಯುತ್ತದೆ. ಹಾಗೆಯೇ ಒಂದೂವರೆ ವರ್ಷಗಳ ಕಾಲ ಗ್ರಹಣ ಹಿಡಿದಿತ್ತು. ಗ್ರಹಣ ಬಿಟ್ಟ ಕಾಲ ಈಗ ಬಂದಿದೆ. ನಿಮ್ಮೆಲ್ಲರ ಆಶೀವರ್ಾದ ನನ್ನ ಮೇಲಿದ್ದರೆ ಮತ್ತೊಂದು ಬಾರಿ ಶಾಸಕನಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ಬಸನಗೌಡ ಮರದ, ರೇವಣಸಿದ್ದಪ್ಪ, ಸಣ್ಣತಮ್ಮಪ್ಪ ಬಾಕರ್ಿ, ಶಿವಾನಂದಪ್ಪ ಕನ್ನಪ್ಪಳವರ, ಮೀರಾ ಪ್ರಭಾಕರ, ಶಶಿಧರ ಬಸೇನಾಯ್ಕರ್ ಮತ್ತಿತರಿದ್ದರು. ಕೆ.ಆರ್.ಬ್ಯಾಡಗಿ, ಶಿವಣ್ಣ ಮಣೇಗಾರ, ಮಂಜಣ್ಣ ಕಂಬಳಿ, ಸುರೇಶ್ ದೊಡ್ಮನಿ, ಅಲ್ತಾಫ್ ಖಾಜಿ, ನೂರುಲ್ಲಾ ಖಾಜಿ, ಮೃತ್ಯುಂಜಯ ಗುದಿಗೇರ, ಸಲೀಂ ಮೆಣಸಿನಕಾಯಿ, ನಾರಾಯಣ ಮೆಹರ್ವಾಡೆ, ಕೋಡಿಹಳ್ಳಿ ನಿಂಗರಾಜ ಮೊದಲಾದವರು ಸೇರಿದಂತೆ ಮತ್ತಿತರರು ಪಕ್ಷಕ್ಕೆ ಸೇರ್ಪಡೆಗೊಂಡರು.