ಶರನ್ನವರಾತ್ರಿ ಸಮಾರೋಪ ಸಮಾರಂಭ

ಲೋಕದರ್ಶನ ವರದಿ

ಘಟಪ್ರಭಾ 19: ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶರನ್ನವರಾತ್ರಿ ಸಮಾರೋಪ ಸಮಾರಂಭವು ದಿ.20 ರಂದು ಮುಂಜಾನೆ 11 ಗಂಟೆಗೆ ಜರುಗಲಿದ್ದು,ಬೆಳಿಗ್ಗೆ ಅಭಿಷೇಕ, ಪೂಜೆ, ಶ್ರೀನಿಧಿ ಸೇವಾ ಪುರಸ್ಕಾರ ಪ್ರದಾನ, ಮಹಾಪ್ರಸಾದ ಜರುಗಲಿದೆ.

                ದೇವಿಯ ಪಾರಾಯಣ ಮಾಡಿದ ಭಕ್ತರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ, ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಜಿ ವಹಿಸುವರು. ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.ಪ್ರಭಾ ನಗರದ  ವೇದಾಂತ್ವಿದ್ವಾನ್ ಶ್ರೀ ದಯಾನಂದ ಮಹಾಸ್ವಾಮಿಜಿ, ದಯಾನಂದ ಬೆಳಗಾವಿ ಶರಣರು, ಕಾಮರ್ಿಕ ಮುಖಂಡ ಅಂಬಿರಾವ್ ಪಾಟೀಲ, ಜಿ.ಪಂ ಸದಸ್ಯೆ ಮೀನಾಕ್ಷಿ ಜೋಡಟ್ಟಿ, ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ, ಅಮೃತ ಕಾಳ್ಯಾಗೋಳ, ಮಾರುತಿ ಜಾಧವ ಸೇರಿದಂತೆ ಇತರರು ಉಪಸ್ಥಿತರಿರುವರು.